ಆಫ್ರಿಕಾದ ವಲಸೆಗಾರರನ್ನು ಹೊತ್ತ ದೋಣಿಯು ಇಟೆಲಿಯ ಕ್ರೋಟೋನ್ ಕರಾವಳಿಯಾಚೆ ಮೆಡಿಟರೇನಿಯನ್ ಸಮುದ್ರದಲ್ಲಿ ನಟ್ಟ ನಡುವೆ ತುಂಡಾಗಿ ಮುಳುಗಿದ್ದರಿಂದ 40ರಷ್ಟು ಜನರು ಭಾನುವಾರ ಸಾವಿಗೀಡಾದರು.

ಒಮ್ಮೆ ಸಂರಕ್ಷಿಸಬಹುದು. ಅಪಾಯಕಾರಿ ಮೆಡಿಟರೇನಿಯನ್ ಕಡಲನ್ನು ಮತ್ತೆ ಮತ್ತೆ ವಲಸಿಗರು ದಾಟುವ ಸಾಹಸದಲ್ಲಿ‌ ಮುಳುಗುವುದಾದರೆ ಅವರ ಸಂರಕ್ಷಿತತೆಯ ಜವಾಬ್ದಾರಿ ಹೊರಲಾಗದು ಎಂದು ಇಟೆಲಿ ಸಂಸತ್ತು ಶನಿವಾರವಷ್ಟೆ ಕಾಯ್ದೆ ಪಾಸು ಮಾಡಿತ್ತು.

ಆಫ್ರಿಕಾದ ಬಡತನದಲ್ಲಿ ಬಾಡಿದವರು ದೊಡ್ಡ ದೋಣಿಗಳಲ್ಲಿ ಮೆಡಿಟರೇನಿಯನ್ ಸಮುದ್ರ ದಾಟಿ ಇಟೆಲಿ ಮೂಲಕ ಯೂರೋಪ್ ಸೇರುತ್ತಾರೆ. ಉತ್ತಮ ಭವಿಷ್ಯದ ‌ಕನಸು ಹೊತ್ತು ಬರುವ ಇವರಲ್ಲಿ ತುಂಬ ಮಂದಿ ಸುರಕ್ಷಿತ ವ್ಯವಸ್ಥೆಯಿಲ್ಲದ ಯಾನದಲ್ಲಿ ಕಡಲ ಪಾಲಾಗುವುದು ಹೆಚ್ಚುತ್ತಲೇ ಇದೆ.