ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ, ಊನಾಂಗ ಇತ್ಯಾದಿ ಪಿಂಚಣಿಗಳ ಪರಿಶೀಲನೆಯಲ್ಲಿ 4.19 ಲಕ್ಷ ಅನರ್ಹ ಕಂಡು ಬಂದಿದ್ದು, ರದ್ದು ಪಡಿಸಲಾಗಿದೆ, ಇದರಿಂದ ಬೊಕ್ಕಸಕ್ಕೆ ವಾರ್ಷಿಕ ರೂ. 504 ಕೋಟಿ ಉಳಿತಾಯ ಆಗಿದೆ ಎಂದು ಸಚಿವ ಆರ್. ಅಶೋಕ್ ಹೇಳಿದರು.

ಈ ಪಿಂಚಣಿ ವೇತನಗಳಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. 95.58 ಶೇಕಡಾ ಆಧಾರ್ ಹೊಂದಾಣಿಕೆ ಆಗಿದೆ. ವಿಳಾಸ, ನೆಲೆ ಇಲ್ಲದ 7.50 ಲಕ್ಷ ‌ಪಿಂಚಣಿದಾರರನ್ನು ಭೌತಿಕವಾಗಿ ಗುರುತಿಸಲಾಗಿದೆ ಎಂದು ಸಹ‌ ಸಚಿವರು ತಿಳಿಸಿದರು.