ಭಾರತೀಯ ರಿಸರ್ವ್ ಬ್ಯಾಂಕ್ ಇಲ್ಲವೇ ಸರಕಾರದ ಅನುಮತಿಗೆ ಕಾಯದೆಯೇ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ 100% ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ತೀರ್ಮಾನವನ್ನು ಕೇಂದ್ರ ಸಂಪುಟ ಸಭೆಯು ಕೈಗೊಂಡಿತು.

ಮೋದಿ ಸರಕಾರವು‌ 2017ರಲ್ಲಿ ಈ ಬಗೆಗೆ ಮೊದಲ ತೀರ್ಮಾನ ಮಾಡಿದ್ದರೂ ಆ ತೀರ್ಮಾನ ಇಷ್ಟು ಸ್ಪಷ್ಟವಾಗಿ ಇರಲಿಲ್ಲ. ಅದೇ ರೀತಿ ಸಂಪುಟ ಸಭೆಯಲ್ಲಿ ದೂರ ಸಂಪರ್ಕ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳವ ತೀರ್ಮಾನವೂ ಆಯಿತು.