ಬ್ರಿಟನ್ನಿನ 18 ವರುಷದ ತರುಣಿ ಎಮ್ಮಾ ರಡಕನು ಅವರು ಫೈನಲ್‌ನಲ್ಲಿ ಮತ್ತೊಬ್ಬ 19ರ ತರುಣಿ ಕೆನಡಾದ ಲೈಲಾ ಫೆರ್ನಾಂಡೀಸ್‌ರನ್ನು ಸೋಲಿಸಿ ಯುಎಸ್ ಓಪನ್ ಟೆನ್ನಿಸ್ ಮಹಿಳಾ ವಿಭಾಗದ ಚಾಂಪಿಯನ್ ಆದರು.

1977ರಲ್ಲಿ ಬ್ರಿಟನ್ನಿನ ವರ್ಜೀನಿಯಾ ವೇಡ್ ಆ ದೇಶದ ಪರ ಕೊನೆಯ ಗ್ರಾನ್‌ಸ್ಲಾಮ್ ಗೆದ್ದಿದ್ದ ಮಹಿಳೆ. ಹಾಗೆಯೇ ಅದೇ ವೇಡ್ ಬ್ರಿಟನ್ ಪರ 1968ರಲ್ಲಿ ಕೊನೆಯ ಸಲ ಯುಎಸ್ ಓಪನ್ ಗೆದ್ದಿದ್ದ ಮಹಿಳೆ ಆಗಿದ್ದರು. ಹಾಗಾಗಿ ಎಮ್ಮಾ ಸಾಧನೆ ಅಮ್ಮಮ್ಮಾ ದೊಡ್ಡದು.

150ನೇ ರಿಯಾಂಕಿನಲ್ಲಿದ್ದು ಗ್ರಾನ್‌ಸ್ಲಾಮ್ ಗೆದ್ದ ಸಾಧನೆ ಮಾಡಿದ ಎಮ್ಮಾ ರಡುಕನು ಗೆದ್ದ ನೇರ ಹಣ 18.38 ಕೋಟಿ ರೂಪಾಯಿ.