ಭೂಪೇಂದ್ರ ಪಟೇಲರನ್ನು ಗುಜರಾತ್ ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿದ್ದು, ಸೋಮವಾರ ಅವರು ಪ್ರಮಾಣವಚನ ಸ್ವೀಕರಿಸಿದರು.
2017ರಲ್ಲಿ ಮೊದಲ ಬಾರಿಗೆ ಶಾಸಕರಾಗಿರುವ ಭೂಪೇಂದ್ರರ ಹೆಸರು ಆದ್ಯ ಪಟ್ಟಿಯಲ್ಲಿ ಇರಲಿಲ್ಲ. ಮಾಜೀ ಮುಖ್ಯಮಂತ್ರಿ ಆನಂದಿಬೆನ್ ಪಟೇಲರು ರಾಜ್ಯಪಾಲರಾದ ಬಳಿಕ ಅವರ ಘಟ್ಲೋರಿಯಾ ಕ್ಷೇತ್ರದಲ್ಲಿ ಗೆದ್ದವರು ಭೂಪೇಂದ್ರ ಪಟೇಲ್. ಹಿಂದೆ ಅಹಮದಾಬಾದ್‌ನಲ್ಲಿ ಕೌನ್ಸಿಲರ್, ನಗರಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು.
ಕೇಂದ್ರ ಬಿಜೆಪಿ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ ಜೋಶಿ, ಪ್ರಧಾನ ಕಾರ್ಯದರ್ಶಿ ತರುಣ ಚೂಪ ಸಮ್ಮುಖದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡಲಾಯಿತು.