ಮಂಗಳೂರು: ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ 78ನೇ ಸ್ವಾತಂತ್ರ ದಿನಾಚರಣೆಯು ನಗರದ ಉರ್ವ ಸ್ಟೋರ್ ಮೈದಾನದಲ್ಲಿ ನಡೆಯಿತು. ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಕಾಂಗ್ರೆಸ್ಸ್ ಪಕ್ಷದ ಕಾರ್ಯಕರ್ತರ ಮಕ್ಕಳಿಗೆ ನಗದು ಹಾಗೂ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಲಾಯಿತು.
ನಗರ ಬ್ಲಾಕ್ ಕಾಂಗ್ರೆಸ್ಸ್ ಅಧ್ಯಕ್ಷರಾಗಿರುವ ಪ್ರಕಾಶ್ ಬಿ.ಸಾಲಿಯಾನ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಜನಾಬ್ ಮೊಹಮ್ಮದ್ ಮಸೂದ್ ರವರು ವಹಿಸಿಕೊಂಡಿದ್ದರು. ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯು ಎಲ್ಲಾ ಧರ್ಮೀಯರನ್ನು ಸೇರಿಸಿಕೊಂಡು 78 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವುದು ನನಗೆ ಸಂತಸ ತಂದಿದೆ ಎಂದರು.
ಮಾಜಿ ಶಾಸಕರಾಗಿರುವ ಜೆ. ಆರ್. ಲೋಬೋ ರವರು ಮಾತನಾಡಿ ಮೊಹಮ್ಮದ್ ಮಸೂದ್ ರಂತಹ ಸಜ್ಜನ ರಾಜಕಾರಣಿಯನ್ನು ಆಹ್ವಾನಿಸಿ ಇವತ್ತಿನ ಸಂಭ್ರಮಾಚರಣೆಗೆ ಹೊಸ ಜೀವ ಕಳೆ ತುಂಬಿದಂತಾಗಿದೆ,ಮಾತ್ರವಲ್ಲದೆ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಪಕ್ಷದ ಜನಪರ ಚಿಂತನೆಯ ಕೆಲಸ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವಂತಹ ಚಿಂತನೆಯು ಇದರಲ್ಲಿದೆ ಅಂದರು.
ವೇದಿಕೆಯಲ್ಲಿ ಹಿರಿಯ ನಾಯಕ ಸುರೇಶ್ ಬಳ್ಳಾಲ್,ಮಾಜಿ ಮಹಾಪೌರ ಶಶಿಧರ್ ಹೆಗ್ಡೆ,ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ, ವಿಶ್ವಾಸ್ ಕುಮಾರ್ ದಾಸ್, ರೂಪ ಚೇತನ್, ಅಲೆಸ್ಟಿನ್ ಡಿ'ಕುನ್ಹ,ರಾಕೇಶ್ ದೇವಾಡಿಗ, ಸಂತೋಷ್ ಕುಮಾರ್ ಶೆಟ್ಟಿ, ಅಲೀಮ್ ,ಡಾ.ಬಿ.ಜಿ ಸುವರ್ಣ, ಶೇಖರ್ ಶೆಟ್ಟಿ,ದಿನೇಶ್ ಬಲಿಪ ತೋಟ, ಮುಂತಾದವರು ಉಪ್ಥಿತರಿದ್ದರು.
ಈ ಸಂದರ್ಭದಲ್ಲಿ ಪಕ್ಷದ ಕೆಲಸ ಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತಾ ಬರುತ್ತಿರುವ ನಾಮ ನಿರ್ದೇಶಿತ ಮಹಿಳಾ ಕಾರ್ಪೊರೇಟರ್ ತನ್ವೀರ್ ಶಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಜನೀಶ್ ಕಾಪಿಕಾಡ್, ನೆಲ್ಸನ್,ಶಾಂತಲಾ ಗಟ್ಟಿ, ಮಂಜುಳಾ ನಾಯಕ್,ಲಿಯಾಕತ್ ಷಾ, ಹ್ಯಾರಿ ಡಿ'ಸೋಜಾ, ಜಾರ್ಜ್, ಎನ್ . ಕೆ.ಅಬುಕರ್ , ವಿಕಾಸ್ ಶೆಟ್ಟಿ, ಉದಯ್ ಆಚಾರ್,ರಾಜೇಂದ್ರ ಚಿಲಿಂಬಿ, ಉದಯ ಕುಂದರ್,ಪ್ರೇಮನಾಥ್ ಸುನಿಲ್ ಬಜಿಲಕೇರಿ, ಶಾಂತಿ ಅಮ್ಮಣ್ಣ, ಕಿರಣ್ ಜೇಮ್ಸ್,ಮೇರಿ ಸಂಕ್ಟಿಸ್,ಮರಿಯ,ಮೋಹಿನಿ, ರಮಣಿ,ನಾಗವೇಣಿ ,ಪ್ರತಿಭಾ ಸಾಲಿಯಾನ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ವಚೇತನ್ ಉರ್ವ ಹಾಗೂ ಕಿರಣ್ ಕುಮಾರ್ ಕೋಡಿಯಾಲ್ ಬೈಲ್ ಕಾರ್ಯಕ್ರಮ ನಿರ್ವಹಿಸಿದರು.
ಪ್ರಥ್ವಿ ಸಾಲಿಯಾನ್ ಧನ್ಯವಾದ ಸಮರ್ಪಿಸಿದರು.