ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮೂಡುಬಿದಿರೆಯ ಖಾಸಗಿ ಬಸ್ಸುಗಳಲ್ಲಿ ಸಂಚರಿಸುವಾಗ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ರಹಮಾನ್ ಎನ್ನುವ ವ್ಯಕ್ತಿಯ ಮೇಲೆ ಸುಮೊಟೊ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯಿಂದ ನಾಯಕಿಯರಾದ ರಮಿತಾ, ಗೀತಾ, ರಂಜಿತಾ ಎನ್ನುವರು ಮೂಡುಬಿದಿರೆ ಪೊಲೀಸ್ ಠಾಣೆಗೆ ಮನವಿ ಅರ್ಪಿಸಿ ದೂದು ನೀಡಿರುತ್ತಾರೆ.
ದೂರನ್ನು ಸ್ವೀಕರಿಸಿ ಮಾತನಾಡಿದ ಪೊಲೀಸ್ ನಿರೀಕ್ಷಕ ಸಂದೇಶ ಪಿ ಜಿ ಅವರು ತಕ್ಷಣ ಸೂಕ್ತ ಕ್ರಮ ಕೈಗೊಂಡು ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡುವ ಭರವಸೆಯನ್ನು ನೀಡಿರುತ್ತಾರೆ.