ಆಫ್ರಿಕಾ ಮೂಲದ ಅಮೆರಿಕ ಸಂಯುಕ್ತ ಸಂಸ್ಥಾನದ ಬಾಲಕಿ 8ನೇ ತರಗತಿಯ, 14 ವರುಷದ ಬಾಲಕಿ ಜಾಯೆಲಾ ಅವಂತ್ ಗಾರ್ಡ್ 2021ರ ಸ್ಕ್ರಿಪ್ಟ್ ನ್ಯಾಶನಲ್ ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ವಿಜೇತಳಾಗಿ ಡಬಲ್ ದಾಖಲೆ ಬರೆದಿದ್ದಾಳೆ.
ಸ್ಪೆಲ್ಲಿಂಗ್ ಬೀ ಸ್ಪರ್ಧೆಯ 93 ವರುಷಗಳ ಇತಿಹಾಸದಲ್ಲಿ ವಿಜೇತಳಾದ ಮೊದಲ ಆಫ್ರಿಕಾ ಬಾಲಕಿ. ಹಾಗೆಯೇ ಆಕೆ ವಾಸವಿರುವ ಲೂಸಿಯಾನಾದಿಂದ ಈ ಸ್ಪರ್ಧೆಯಲ್ಲಿ ಗೆದ್ದಿರುವ ಮೊದಲಿಗಳು ಸಹ ಈ ಬಾಲಕಿ.
ಕಳೆದ ಕೆಲವು ವರುಷಗಳಿಂದ ಇದರಲ್ಲಿ ಮಿಂಚುತ್ತಿದ್ದ ಭಾರತೀಯ ಮೂಲದ ಅಮೆರಿಕನ್ನರು ಈ ಬಾರಿ ತುಸು ಜಾರಿದರು. ಸ್ಯಾನ್ ಫ್ರಾನ್ಸಿಸ್ಕೊದ 12ರ ಚೈತ್ರಾ ತುಮ್ಮಲಾ 2ನೇ ಸ್ಥಾನ ಪಡೆದರು ಮತ್ತು ನ್ಯೂಯಾರ್ಕ್‌ನ 13ರ ಭಾವನಾ ಮದಿನಿ 3ನೇ ಸ್ಥಾನ ಪಡೆದರು.
ಇದರ ಮೊದಲ ಬಹುಮಾನ 50,000 ಡಾಲರ್ ಅಂದರೆ ರೂ. 37 ಲಕ್ಷ ನಗದು ಬಹುಮಾನವನ್ನು ಹೊಂದಿದೆ.
11 ಜನ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಇದ್ದರು.