ಮಂಗಳೂರು ಉತ್ತರ ಭಾಗದಲ್ಲಿ ಬಹುತೇಕ ನೀರಿನ ಕೊರತೆ ಕಾಡುತ್ತಿದ್ದು ಮುಖ್ಯವಾಗಿ ಅಲ್ಲೆಲ್ಲ 11 ಟ್ಯಾಂಕರ್‌ಗಳ ಮೂಲಕ ಪ್ರತಿದಿನ 4.89 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂದೂರುವೆಲ್, ಕರಾವಳಿ, ಕುಳಾಯಿ, ಮೇರಿ ಹಿಲ್ ಪಂಪ್ ಹೌಸ್‌ಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ತುಂಬೆ ಅಣೆಕಟ್ಟೆಯಲ್ಲಿ ಈಗ 4.34 ಲೀಟರ್‌ ನೀರು ‌ಇದ್ದು, ಇದು ಮಂಗಳೂರು ನಗರದ 25 ದಿನಗಳ ಪೂರೈಕೆಗೆ ಸಾಕು. ಮೊನ್ನೆ ನೀರಿನ ಮಟ್ಟ 4 ಮೀಟರಿಗೆ ಇಳಿದಿತ್ತು. ಲಭ್ಯ ಏತ ನೀರಾವರಿ ಮೂಲಕ ನೀರಿನ ಮಟ್ಟ ಹೆಚ್ಚು ಮಾಡಲಾಗಿದೆ ಎಂದು ಸಹ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.