ಡಬ್ಲ್ಯುಎಫ್ಐ- ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ, ಬಿಜೆಪಿ ಸಂಸದ, ಸ್ತ್ರೀ ಶೋಷಕ ಬ್ರಿಜ್ ಭೂಷಣ್ ಶರಣ್ ಸಿಂಗ್ ವಜಾಕ್ಕೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳ ಮೇಲೆ ದಿಲ್ಲಿಯ ಪೋಲೀಸರು ದೌರ್ಜನ್ಯ ನಡೆಸಿರುವುದು ವರದಿಯಾಗಿದೆ.

ಈ ಬಗೆಗೆ ಅಂತರರಾಷ್ಟ್ರೀಯ ಮಹಿಳಾ ಕುಸ್ತಿ ಪಟುಗಳಾದ ವಿನೇಶ್ ಪೋಗಟ್, ಸಾಕ್ಷಿ ಮಲಿಕ್, ಸಂಗೀತಾರು ಕಣ್ಣೀರು ಹಾಕಿಕೊಟ್ಟ ಪತ್ರಕರ್ತರಿಗೆ ಮಾಹಿತಿ ನೀಡಿದರು. ಅವರು ಗಾಯಗೊಂಡಿರುವುದು ಕೂಡ ಕಂಡು ಬಂತು. ತಾವು ಗೆದ್ದ ಪದಕಗಳನ್ನು, ಪ್ರಶಸ್ತಿಗಳನ್ನು ಸರಕಾರಕ್ಕೆ ಹಿಂತಿರುಗಿಸಲು ಕುಸ್ತಿ ಪಟುಗಳು  ನಿಶ್ಚಯಿಸಿರುವುದಾಗಿ ತಿಳಿದು ಬಂದಿದೆ.