ಮೂಡುಬಿದಿರೆ : ಜೈನ ಕಾಶಿ ಮೂಡುಬಿದಿರೆಯಲ್ಲಿ ಈ ದಿನ ನಾಗರ ಪಂಚಮಿ ನಿಮಿತ್ತ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಮಾರ್ಗದರ್ಶನ ದಲ್ಲಿ 16ಬಸದಿ ಗಳಲ್ಲಿ ವಿಶೇಷ ಪೂಜೆ ನಾಗಬನಗಳಲ್ಲಿ ಸದೋಪಚಾರ, ಪೂಜೆ, ಜಲ ಎಳನೀರು, ಅಕ್ಕಿ ಹಿಟ್ಟು ಹಾಲು, ಅರಶಿನ, ಶ್ರೀ ಗಂದ,ಅರಳು, ಬೆಲ್ಲ, ತೆಂಗಿನ ಕಾಯಿ,ಬಾಳೆ ಕಾಯಿ ಹೂ ವಿನಿಂದ ಶೃಂಗಾರ ಮಾಡಿ ತನು ಹೊಯ್ಯಲಾಯಿತು.
ಈ ಸಂಧರ್ಭ ಆಶೀರ್ವಾದ ನೀಡಿದ ಮೂಡು ಬಿದಿರೆ ಸ್ವಾಮೀಜಿ ಗುರು ಬಸದಿ, ಕೆರೆ ಬಸದಿ, ಸಾವಿರ ಕಂಬ ಬಸದಿ ಯ ಪೂಜೆ ಯಲ್ಲಿ ಶ್ರೀ ಗಳು ಪಾಲ್ಗೊಂಡು ಆದಿ ಪುರಾಣ, ಪಾರ್ಶ್ವ ಪುರಾಣ ದಲ್ಲಿ ಧರಣೇಂದ್ರ ಯಕ್ಷ ನಾಗ ಬನ ವರ್ಣನೆ ಇದ್ದು ಜೈನ ಪೂಜಾ ವಿಧಿ ಯಲ್ಲಿ ಪಂಚ ಕುಮಾರ ಪೂಜೆ ಅಷ್ಟ ಕುಲನಾಗ ದೇವರ ಪೂಜೆ ಶ್ರೇಯಸ್ಸು, ಇಷ್ಟಾರ್ಥ ಸಿದ್ದಿ ಅರೋಗ್ಯ ಕುಟುಂಬ ಸೌಖ್ಯ ಧರ್ಮ ಲಾಭಕ್ಕಾಗಿ ಉಪಚಾರ 3,4ನೇ ಗುಣ ಸ್ಥಾನ ವರ್ತಿ ಶ್ರಾವಕರು ವಿನಯ ಪೂಜೆ ಭಕ್ತಿ ಸಲ್ಲಿಸುವ ಸಂಪ್ರದಾಯ ಮೊದಲಿನಿಂದಲೂ ಆಚರಣೆಯಲ್ಲಿದೆ ಲೋಕ ಶಾಂತಿಗಾಗಿ ಶಾಂತಿ ಧಾರೆಯಲ್ಲಿ ಉಲ್ಲೇಕಿಸಿ ಪೂಜಿಸುವ ಕ್ರಮವಿದೆ ಎಂದು ಗುರು ಬಸದಿಯಲ್ಲಿ ನೆರೆದ ಭಕ್ತಾದಿಗಳಿಗೆ ತಿಳಿಸಿ ಸರ್ವರಿಗೂ ಆಶೀರ್ವಾದ ನೀಡಿದರು ಗುರು ಬಸದಿ 2.8.22 ರಂದು ಬೆಳಿಗ್ಗೆ 7.00ಗಂಟೆ ಗೆ ಪೂಜೆ ಪ್ರಾರಂಭವಾಗಿ ಭಕ್ತಾದಿಗಳು ಬಹು ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.