ಉಡುಪಿ :  ಟಿ ರಮೇಶ್, ಚೀಫ್ ಜನರಲ್ ಮ್ಯಾನೇಜರ್,ನಬಾರ್ಡ್ ಕರ್ನಾಟಕ ಇವರು ಇತ್ತೀಚೆಗೆ ತಾಳಿಪಾಡಿ ನೇಕಾರ ಸಂಘಕ್ಕೆ ಭೇಟಿ ನೀಡಿದರು. ಕದಿಕೆ ಟ್ರಸ್ಟ್ ನಬಾರ್ಡ್ ಬೆಂಬಲದೊಂದಿಗೆ ನಡೆಸಿದ ಉಡುಪಿ ಸೀರೆ ನೇಕಾರಿಕೆ ತರಬೇತಿ ಪಡೆದ ನವ ನೇಕಾರೊಂದಿಗೆ ಮಾತುಕತೆ ನಡೆಸಿ ನೇಕಾರರ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಟ್ರಸ್ಟ್ ನ ಪುನಶ್ಚೇತನ ಕಾರ್ಯದ ಬಗ್ಗೆ ವಿವರಿಸಿದರು. ಕದಿಕೆ ಟ್ರಸ್ಟ್ ತರಬೇತಿ ನಂತರವೂ ನೇಕಾರಿಗೆ ಕನಿಷ್ಠ ವೇತನ ಮತ್ತು ಇತರ ಬೆಂಬಲ ಕೊಡುತ್ತಿರುವುದನ್ನು ತಿಳಿಸಿದರು.

ಮುಂದೆ ನಡೆದ ಸಭೆಯಲ್ಲಿ ಚೀಫ್ ಜನರಲ್ ಮ್ಯಾನೇಜರ್ ಅವರು ನೇಕಾರರನ್ನು ಉದ್ದೇಶಿಸಿ ಮಾತನಾಡಿ ನಬಾರ್ಡ್ ನ ವಿವಿಧ ಯೋಜನೆಗಳ ವಿವರ ನೀಡಿದರು. ನವ ನೇಕಾರರಿಗೆ ಪ್ರೋತ್ಸಾಹದ ಮಾತುಗಳನ್ನಾಡಿ, ಸ್ವ ಸಹಾಯ ಸಂಘವನ್ನು ರಚಿಸಿ ಉಳಿತಾಯ ಮಾಡಲು ಉತ್ತೇಜನ ನೀಡಿದರು. ಕದಿಕೆ ಟ್ರಸ್ಟ್ ನ  ಕಾರ್ಯವನ್ನು ಶ್ಲಾಘಿಸಿ ಮುಂದೆ ಟ್ರಸ್ಟ್ ನಡೆಸಬಹುದಾದ ಯಾವುದೇ ಉತ್ತಮ ಕಾರ್ಯಕ್ಕೆ ನಬಾರ್ಡ್ ಬೆಂಬಲ ಇರುವುದು ಎಂದು ತಿಳಿಸಿದರು.