Photo Credit: VarthaBharathi

ಎಸಿಬಿ- ಭ್ರಷ್ಟಾಚಾರ ನಿಗ್ರಹ ದಳದವರು ಬುಧವಾರ ಬೆಳ್ಳಂಬೆಳಿಗ್ಗೆ ಮಂಗಳೂರು ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ. ಎಸ್. ನಿಂಗೇಗೌಡರ ಸಹಿತ ರಾಜ್ಯದಾದ್ಯಂತ ದಾಳಿ ನಡೆಸಿದರು.

ಕರ್ನಾಟಕದ ಉದ್ದಗಲಕ್ಕೂ ಆದಾಯ ಮೀರಿ ಆಸ್ತಿ ಸಂಪಾದಿಸಿರುವವರ ಮೇಲೆ ಈ ದಾಳಿ ನಡೆಯಿತು. ಒಟ್ಟು 15 ಅಧಿಕಾರಿಗಳ ಮನೆಗಳಿಗೆ ದಾಳಿ ಮಾಡಿದ ಎಸಿಬಿಯವರು ನಾನಾ ವಸ್ತು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು.