ಹಲವಾರು ವರುಷಗಳಿಂದ ಅಫಘಾನಿಸ್ತಾನದ ಕಾಬೂಲಿನಲ್ಲಿ ವ್ಯಾಪಾರ ಮಾಡುತ್ತಿದ್ದ ಭಾರತದ ನಾಗರಿಕ ಬನ್ಸಿಲಾಲ್ ಅರೆಂದೆ ಅವರನ್ನು ಅಪರಿಚಿತರು ಬಂದೂಕು ತೋರಿಸಿ ಅಪಹರಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಈ ಸಂಬಂಧ ಅಫಘಾನಿಸ್ತಾನದ ಸರಕಾರದೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಕಾಬೂಲಿಗೆ ಭಾರತದಿಂದ ವಿಮಾನಯಾನ ಆರಂಭವಾಗಿಲ್ಲ. ಭಾರತೀಯರನ್ನು ಕರೆತರುವ ಕಾರ್ಯ ಸಹ ಆರಂಭಿಕ ಎರಡು ದಿನ ಮಾತ್ರ ನಡೆದಿತ್ತು.