(Representational Image)
2020ರಲ್ಲಿ ಲಾಕ್‌ಡೌನ್ ಇದ್ದರೂ ಕೂಡ ಕೋಮು ಗಲಭೆ, ಜಾತಿ ಜಗಳಗಳು 2019ಕ್ಕಿಂತ ದುಪ್ಪಟ್ಟು ಅಧಿಕ ಪ್ರಮಾಣದಲ್ಲಿ ನಡೆದಿವೆ ಎಂದು ಎನ್‌ಸಿಆರ್‌ಬಿ- ರಾಷ್ಟ್ರೀಯ ಅಪರಾಧಿಗಳ ದಾಖಲೆ ಬ್ಯೂರೋ ಹೇಳಿದೆ.
2020ರಲ್ಲಿ 857 ಕೋಮು ಗಲಭೆ ಪ್ರಕರಣಗಳು ಭಾರತದಲ್ಲಿ ನಡೆದಿವೆ. 2019ರಲ್ಲಿ 438, 2018ರಲ್ಲಿ 512 ಕೋಮು ಗಲಭೆ ಪ್ರಕರಣಗಳಷ್ಟೆ ನಡೆದಿದ್ದವು.
2020ರಲ್ಲಿ 736 ಜಾತಿ ಸಂಘರ್ಷ ಘಟನೆಗಳು ದೇಶದಲ್ಲಿ ನಡೆದಿವೆ. 2019 492, 2018ರಲ್ಲಿ 656 ಜಾತಿ ಸಂಘರ್ಷ ಸಂಗತಿಗಳು ಇಂಡಿಯಾದಲ್ಲಿ ನಡೆದಿದ್ದವು ಎಂದು ಎನ್‌ಸಿಆರ್‌ಬಿ ಹೇಳಿದೆ.