ದಶ ಲಕ್ಷಣ ಪರ್ವದ ಉತ್ತಮ ತಪೋದಿನವಾದ ಇಂದು ಜಗದ್ಗುರು ಡಾ ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಜೈನ ಕಾಶಿ ಶ್ರೀ ಜೈನ ಮಠ ಕ್ಕೆ ಭೇಟಿ ನೀಡಿ ಶ್ರೀ ಮಠದ ಭಗವಾನ್ ಪಾರ್ಶ್ವ ನಾಥ ಸ್ವಾಮಿ ಚಾತು ರ್ಮಾಸ ನಿರತ 108 ದಿವ್ಯ ಸಾಗರ ಮುನಿ ರಾಜ ಹಾಗೂ ಮಠದ ಮಾತೆ ಕೂಶ್ಮಾoಡಿನಿ ದೇವಿ ದರ್ಶನ ಮಾಡಿದರು.
ಈ ಸಂಧರ್ಭ ದಲ್ಲಿ ಜಗದ್ಗುರು ಡಾ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಅಧ್ಯಕ್ಷತೆಯಲ್ಲಿ 16.09.21 ರಂದು ಸಂಜೆ 4.30 ಕ್ಕೆ ಜರುಗಿದ ಧಾರ್ಮಿಕ ಸಭೆಯಲ್ಲಿ ಹುಂಬುಜ ಸ್ವಾಮೀಜಿಯವರನ್ನು ಗೌರವ ವಿನಾಯoಜಲಿ ಅರ್ಪಿಸಿ ಉಭಯ ಶ್ರೀ ಗಳವರ ಪಾದ ಪೂಜೆ ನೆರವೇರಿತು ಬಳಿಕ ಆಶೀರ್ವಾದ ನೀಡಿದ ಹುಂಬುಜ ಶ್ರೀ ಗಳವರು "ಈ ದಿನ ಉತ್ತಮ ತಪೋ ದಿನವಾಗಿದೆ ತಪಸ್ವಿಗಳನ್ನು ಗೌರವಿಸಿ ಅವರ ವಿಚಾರ ಧಾರೆಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿದವರು ಜೀವನದಲ್ಲಿ ಸಂತೋಷ ನೆಮ್ಮದಿ ಪಡೆದು ಭವಿಷ್ಯದಲ್ಲಿ ಸ್ವರ್ಗ ಮೋಕ್ಷ ಪಡೆಯಲು ಅರ್ಹರಾಗುತ್ತಾರೆ ಮೂಡುಬಿದಿರೆ ಪ್ರಾಚೀನ ಜೈನ ಕೇಂದ್ರ ಇಲ್ಲಿಯ ಬಸದಿ ದರ್ಶನ ಮಾಡುದರಿಂದ ಪುಣ್ಯ ಸಿಗುತ್ತೆ ಧವಲ ಗ್ರಂಥಗಳು ನಮ್ಮ ಅಜ್ಞಾನ ದೂರ ಮಾಡುದು ಎಂದು ನುಡಿದರು."
ಮೂಡುಬಿದಿರೆ ಸ್ವಸ್ತಿಶ್ರೀ ಸ್ವಾಮೀಜಿ ಆಶೀರ್ವಾದ ನೀಡಿ ಜೈನರ ಶ್ರದ್ದಾ ಕೇಂದ್ರ ಹುಂಬುಜ ಕ್ಷೇತ್ರಕ್ಕೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೂ ಅವಿನಾ ಭಾವ ಸಂಬಂಧ ಯುವ ಸ್ವಾಮೀಜಿ ತುಂಬಾ ಪ್ರಗತಿ ಕಾರ್ಯ ನಡೆಸುತ್ತಿದ್ದು ಕ್ಷೇತ್ರಕ್ಕೆ ಪರ್ವಕಾಲದಲ್ಲಿ ಬೇಟಿ ನೀಡಿರುದು ಸಂತೋಷವಾಗಿದೆ ಇಚ್ಛೆಯ ನಿರೋದ ತಪಸ್ಸು ಯೋಗಿ ತ್ಯಾಗಿಗಳ ಬೀಡು ಭಾರತ ಭೂಮಿ ಅಂತರಂಗ ತಪ ಬಹಿರಂಗ ತಪ ಆಚರಿಸುತ್ತ ತಮ್ಮ ಆತ್ಮ ಕಲ್ಯಾಣ ನಿರತ ಸಾಧು ಸಂತರ ಜೀವನ ಸರ್ವರಿಗೂ ಆದರ್ಶ ಎಂದು ನುಡಿದರು.
ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಬಸದಿ ಮುಕ್ತೇಸರ,ಪ್ರವೀಣ್ ಚಂದ್ರ, ಸನತ್ ಕುಮಾರ್, ಜಯರಾಜ್ ಕಂಬ್ಳಿ, ಚಕ್ರೆಶ್ ಅರಿಗಾ, ಯುವ ರಾಜ್, ಸುಹಾಸ್ ಉಪಸ್ಥಿತರಿದ್ದರು ಶ್ರೀ ಸಂಜಯಂಥ ಕುಮಾರ್ ಶೆಟ್ಟಿಸರ್ವರನ್ನು ಸ್ವಾಗತಿಸಿ ದರು