ಮಂಗಳೂರು ಕಮಿಷನರಿಗೆ, ಉಪಪೋಲಿಸ್ ಆಯುಕ್ತ(ಡಿಸಿಪಿ)ರಾದ ಹರಿರಾಮ್ ಶಂಕರ್, ಇವರಿಗೆ ಮನವಿಯನ್ನು ನೀಡಲಾಯಿತು ಮತ್ತು ಕೂಡಲೇ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಡಿಸಿಪಿಯವರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅದೇ ರೀತಿ ಪಾಂಡೇಶ್ವರ ಪೋಲಿಸ್ ಠಾಣೆಗೂ ತೆರಳಿ, ಪೋಲಿಸ್ ಇನ್ಸ್‍ಪೆಕ್ಟರಿಗೆ ದೂರನ್ನು ಸಲ್ಲಿಸಲಾಯಿತು. ದೂರನ್ನು ಸ್ವೀಕರಿಸಿದ ಪೋಲಿಸರು ಕೂಡಲೇ ಕೇಸು ದಾಖಲಿಸುವುದಾಗಿ ತಿಳಿಸಿದ್ದಾರೆ.

ಪತ್ರಿಕಾ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಐವನ್ ಡಿ ಸೋಜ ಇವರು, ದೇಶದ ಲೋಕಸಭೆಗೆ ಶೋಭಾ ಕರಂದ್ಲಾಜೆಯಂತಹ ಸಂಸದರು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಒಂದು ದೊಡ್ಡ ದುರಂತ ಎಂದು ತಿಳಿಸಿದರು. ಇಂತಹವರನ್ನು ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಒಂದು ಸಮುದಾಯವನ್ನೇ ಬಲಿತೆಗೆದುಕೊಂಡು, ಸುಳ್ಳು ಹೇಳಿಕೆಗಳನ್ನು ನೀಡಿರುವುದು ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ ಎಂದು ತಿಳಿಸಿದರು.  ಸಾಧ್ಯವಾಗುವುದಾದರೆ, ಶೋಭಾ ಕರಂದ್ಲಾಜೆಯವರು ನಾಳೆನೇ 10,000 ಮಂದಿ  ಕ್ರೈಸ್ತ ಸಮುದಾಯಕ್ಕೆ,  ತನ್ನ ಕಚೇರಿಯ ಮುಂದೇನೆ ಲಸಿಕೆ ನೀಡಲು ಜನ ಕರೆದುಕೊಂಡು ಬರುವುದಾಗಿ, ಮತ್ತು ಲಸಿಕೆಯನ್ನು ಪೂರೈಸುವಂತೆ ಸವಾಲು ಹಾಕಿದರು. ಈ ಸಮಾರಂಭದಲ್ಲಿ ಅನೇಕ ಕ್ರೈಸ್ತ ನಾಯಕರುಗಳು ಐವನ್ ಡಿ ಸೋಜರವರ ಜೊತೆ ಉಪಸ್ಥಿತರಿದ್ದರು.