ಮುಂಬಯಿ: ಗುರುವಾರ ಗುಜರಾತ್‌ನ ಅಹ್ಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ ದುರಂತ ನಡೆದ ಸುದ್ದಿ ತಿಳಿದು ತುಂಬಾ ದುಃಖವಾಯಿತು. ದುರಂತದಲ್ಲಿ ಮಡಿದ ದೇಶವಿದೇಶದಲ್ಲಿನ ಎಲ್ಲಾ ಪ್ರಯಾಣಿಕರು ಸಿಬ್ಬಂದಿಗಳ ಆತ್ಮಕ್ಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಮತ್ತು ಅಗಲಿದ ಕುಟುಂಬಸ್ಥರೆಲ್ಲರಿಗೆ ಈ ಕಷ್ಟ, ನಷ್ಟದ ಸಮಯದಿ ನೋವನ್ನು ಸಹಸುವ ಶಕ್ತಿ ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಜಗದ್ಗುರು ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ತಿಳಿಸಿದ್ದಾರೆ.
ಇಂತಹ ಘಟನೆ ಮರುಕಳಿಸದಂತೆ ದೊಡ್ಡ ಮಟ್ಟದ ಅಪಾಯ ವಿಮಾನ ಯಾನಿಗಳಿಗೆ ಆಗದಂತೆ ತಾಂತ್ರಿಕತೆಯಲ್ಲಿ ಸುಧಾರಣೆ ಬಹು ಅಗತ್ಯ. ಇದೊಂದು ಜಗತ್ತಿನಲ್ಲಿರುವ ತಂತ್ರಜ್ಞರು ಯೋಚಿಸ ಬೇಕಾದ ಸಮಯವಾಗಿದೆ. ಅಂತರಾಷ್ಟ್ರಿಯ ವಿಮಾನದಲ್ಲಿ ಇದೊಂದು ನಡೆಯ ಬಾರದ ಕೆಟ್ಟ ದುರಂತವಾಗಿದೆ. ಅಗಲಿದವರ ಎಲ್ಲಾ ಬಂಧುಗಳ ದುಃಖವನ್ನು ಸಹಿಸುವ ಶಕ್ತಿ ಶ್ರೀ ಜಿನ ಭಗವಂತ ಜಿನಶಾಸನ ದೇವತೆಗಳು ನೀಡಲೆಂದು ಪ್ರಾಥಿಸುತ್ತೇವೆ ಎಂದೂ ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ತಿಳಿಸಿದ್ದಾರೆ.
ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಸಂತಾಪ ಬೃಹನ್ಮುಂಬಯಿ ಅಲ್ಲಿನ ಹಿರಿಯ ತುಳು-ಕನ್ನಡಿಗ ರಾಜಕೀಯ ಧುರೀಣ, ರಾಷ್ಟ್ರವಾದಿ ಕಾಂಗ್ರೇಸ್ ಪಕ್ಷ (ಎನ್‌ಸಿಪಿ) ಮುಂಬಯಿ ಪ್ರದೇಶ ಉಪಾಧ್ಯಕ್ಷ, ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಲಕ್ಷ್ಮಣ ಸಿ.ಪೂಜಾರಿ ಚಿತ್ರಾಪು ಅವರೂ ದುರಂತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ ಮಡಿದ ಎಲ್ಲಾ ದಿವ್ಯಾತ್ಮಗಳಿಗೂ ಸದ್ಗತಿ, ಚಿರಶಾಂತಿ ಕರುಣಿಸಲಿ ಎಂದು ಪ್ರಾಥಿಸಿದ್ದಾರೆ.