ದೂಷಣೆ ಪ್ರತಿ ದೂಷಣೆ ಮಾತ್ರ ಉಳಿಸುವ ಚರ್ಚೆಗಳು ಮಾಧ್ಯಮದಲ್ಲಿ ವಾಯು ಮಾಲಿನ್ಯವನ್ನು ಮೀರಿದ ಸುದ್ದಿ ಮಾಲಿನ್ಯ ಉಂಟು ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತು.
ದೆಹಲಿ ಸುತ್ತಿನ ವಾಯು ಮಾಲಿನ್ಯದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಮತ್ತು ಜಸ್ಟಿಸ್ ಡಿ. ವೈ. ಚಂದ್ರಚೂಡ್ ಅವರಿದ್ದ ಪೀಠವು ಈ ಅಭಿಪ್ರಾಯ ಪಟ್ಟಿತು.
ಸರಕಾರ ಮತ್ತಿತರ ಮಾಹಿತಿಯಂತೆ ರೈತರು ಕಳೆ ಮತ್ತು ಗದ್ದೆ ಸುಡುವುದರಿಂದ ಆಗುವ ವಾಯು ಮಾಲಿನ್ಯ 4ರಿಂದ 5 ಶೇಕಡಾ ಮಾತ್ರ, ಆದರೆ ಮಾಧ್ಯಮಗಳು ರೈತರದೇ ಕೊಡುಗೆ ಎನ್ನುತ್ತಿವೆ. ಯಾರನ್ನು ರಕ್ಷಿಸಲು ಈ ಪ್ರಚಾರ? ಇತರ ವಿಚಾರಗಳಲ್ಲೂ ಸುದ್ದಿ ಚರ್ಚೆಗಳು ಸುದ್ದಿ ಮಾಲಿನ್ಯ ಹರಡುತ್ತಿವೆ ಎಂದು ಎಂದು ನ್ಯಾಯಾಧೀಶರುಗಳು ಹೇಳಿದರು.