ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಇನ್ಫೋಸಿಸ್ ನಿರ್ಮಿಸಿ ಕೊಟ್ಟ 350 ಹಾಸಿಗೆಗಳ ಹೊಸ ಸಂಕೀರ್ಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಇದರೊಂದಿಗೆ ಇದು ಜಗತ್ತಿನ ಅತಿ ದೊಡ್ಡ ಹೃದ್ರೋಗ ಆಸ್ಪತ್ರೆ ಎನಿಸಿತು.

ಈ ಆಸ್ಪತ್ರೆಯಲ್ಲಿ ಮೊದಲೇ 700 ಹಾಸಿಗೆಗಳ ಚಿಕಿತ್ಸಾ ಸೌಲಭ್ಯ ಇತ್ತು. ಅದು 1,050ಕ್ಕೆ ಏರುವುದರೊಂದಿಗೆ ಇದು ಅತಿ ದೊಡ್ಡ ಆಸ್ಪತ್ರೆಯ ರೂಪ ಪಡೆಯಿತು.