ಅಜೆಕಾರು: ಅಜೆಕಾರು ನಾಡಕಚೇರಿಯಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಉಪತಹಸಿಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ನಮಿತಾ ಬಿ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು. ಅವರು ಉಡುಪಿ ತಾಲೂಕು ಕಚೇರಿಗೆ ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಮಹೇಶ್ ನೇಮಕಗೊಂಡಿದ್ದಾರೆ.

ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಉಪತಹಸಿಲ್ದಾರ್ ನಮಿತಾ ಬಿ, “ಹಿರಿಯರ ಮಾರ್ಗದರ್ಶನ, ಸಹೋದ್ಯೋಗಿಗಳ ಸಹಕಾರ ಮತ್ತು ಸಾರ್ವಜನಿಕರ ವಿಶ್ವಾಸವೇ ನನ್ನ ಕರ್ತವ್ಯದ ನಿಷ್ಠೆಯನ್ನು ಹೆಚ್ಚು ಮಾಡಿತು. ವರ್ಗಾವಣೆ ನಮ್ಮ ಕರ್ತವ್ಯದ ಅವಿಭಾಜ್ಯ ಭಾಗವಾಗಿದೆ. ಆದರೆ ಇಲ್ಲಿ ಕಲಿತ ಪಾಠಗಳು ಹಾಗೂ ಗೆದ್ದ ಸ್ನೇಹಗಳು ಸದಾ ನನ್ನೊಂದಿಗೆ ಇರುತ್ತವೆ” ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ಉಪಸ್ಥಿತಿ ಕಾರ್ಯಕ್ರಮದ ನಿರೂಪಣೆಯನ್ನು ಕಂದಾಯ ನಿರೀಕ್ಷಕರಾದ ರಿಯಾಜ್ ಮಾಡಿದರು. ಮರ್ಣೆ ಗ್ರಾ.ಪಂ ಅಧ್ಯಕ್ಷೆ ಪ್ರಭಾವತಿ, ಗ್ರಾಮ ಆಡಳಿತಾಧಿಕಾರಿಗಳಾದ ರವಿ, ಮಾರುತಿ, ಮಹೇಶ್, ನಿವೇದಿತಾ, ಪ್ರಶಾಂತ್, ಪ್ರಮೋದ್, ಅನಿತಾ ಮತ್ತಿತರ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಹೊಸ ಅಧಿಕಾರಿಯಾಗಿ ಮಹೇಶ್ ಅಧಿಕಾರ ವಹಿಕೆ ಸ್ಥಳಾಂತರಗೊಂಡ ಉಪತಹಸಿಲ್ದಾರ್ ಸ್ಥಾನಕ್ಕೆ ಶ್ರೀ ಮಹೇಶ್ ಅಧಿಕಾರ ವಹಿಸಿಕೊಂಡಿದ್ದಾರೆ.

ಅಜೇಕಾರು ಸೇವಾ ಅವಧಿಯ ಯಶಸ್ಸುಗಳು 2021ರಿಂದ ಅಜೆಕಾರು ನಾಡಕಚೇರಿಯಲ್ಲಿ ಉಪತಹಸಿಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ನಮಿತಾ ಬಿ, ತಮ್ಮ ಅವಧಿಯಲ್ಲಿ ಹಲವಾರು ಗಣನೀಯ ಸಾಧನೆಗಳನ್ನು ಮಾಡಿದರು. ಕೆಲವೆಡತಾದ ಅವಧಿಯಲ್ಲಿ ಕೆರುವಾಶೆ ಶೀಲ ಮಲೆಕುಡಿಯವರಿಗೆ “ಸಂಧ್ಯಾ ಸುರಕ್ಷಾ” ಯೋಜನೆಯ ಮಂಜೂರಾತಿ, ಮಾಳದ ಶ್ರೇಯ ಬರ್ವೆ ಮಗುವಿಗೆ 24 ಗಂಟೆಗಳಲ್ಲಿ ಅಂಗವಿಕಲ ವೇತನ ಮಂಜೂರು, ಕಡ್ತಲಕೊರಗ ಕಾಲೋನಿಗೆ ಬಾವಿ ನಿರ್ಮಾಣಕ್ಕೆ ಅನುದಾನ  ಮೊದಲಾದ ಕಾರ್ಯಗಳು ಜನಪರ ಸೇವೆಯಲ್ಲಿ ಅವರ ಬದ್ಧತೆಯ ಸಾಕ್ಷಿಯಾಗಿದೆ.

ಅವರ ಸಮಯದಲ್ಲಿ ಅಜೆಕಾರು ನಾಡಕಚೇರಿ ಉಡುಪಿ ಜಿಲ್ಲೆಯ ಎಲ್ಲ ನಾಡಕಚೇರಿಗಳ ಪೈಕಿ ಜನಸೇವೆಯಲ್ಲಿ ಮೊದಲ ಸ್ಥಾನವನ್ನು ಗಳಿಸಿದ್ದು ವಿಶೇಷವಾಗಿ ಗಮನ ಸೆಳೆಯುವ ಸಂಗತಿಯಾಗಿತ್ತು.