ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದ ಸಾವಿರಕ್ಕೂ ಹೆಚ್ಚು ಜನರ ಮೇಲೆ ಕೊಲೆ ಯತ್ನ ಮತ್ತು ಪೋಲೀಸರ ಕರ್ತವ್ಯಕ್ಕೆ ಅಡ್ಡಿ ಎಂದು ಮೊದಲ ಮಾಹಿತಿ ವರದಿ ಸಲ್ಲಿಕೆಯಾಗಿದೆ.

ನಂಬಿಹಳ್ಳಿಯ ನಾಗೇಶ್ ಎಂಬಾತ ತನ್ನ ಮೊದಲ ಹೆಂಡತಿ ರಾಧಾ ಮತ್ತು ಮಾವ ಮುನಿಯಪ್ಪರನ್ನು ಕುರಿ ಕಡಿಯುವ ಹೆಗ್ಗತ್ತಿಯಿಂದ ಕಡಿದು ಕೊಂದಿದ್ದ ಮತ್ತು ಸಂಬಂಧಿಕರಾದ ವರುಣ್, ಅಮಿಷಾರನ್ನು ಗಾಯಗೊಳಿಸಿ ಹೋಟೆಲಲ್ಲಿ ಅಡಗಿದ್ದ. ರೊಚ್ಚಿಗೆದ್ದ ಜನರು ಮುತ್ತಿಗೆ ಹಾಕಿದಾಗ ಆರೋಪಿಯು ಗ್ಯಾಸ್ ಸಿಲಿಂಡರ್ ಸ್ಫೋಟಿಸುವ ಬೆದರಿಕೆ ಹಾಕಿದ್ದ. ಊರವರು ಹೋಟೆಲಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಹೋದಾಗ ಪೋಲೀಸರು ತಡೆದಿದ್ದಾರೆ. ಆ ರಂಪದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮುಖ್ಯ ಆರೋಪಿಗಳು ಊರು ತೊರೆದಿದ್ದಾರೆ ಎಂದು ಹೇಳಲಾಗಿದೆ.