ಮಂಗಳೂರು: ಲಾಕ್ ಡೌನ್ ನಿಂದಾಗಿ  ಹೋಟೆಲ್, ಕ್ಯಾಂಟಿನ್  ಗಳು ಮುಚ್ಚಿರುವ ಹಿನ್ನಲೆಯಲ್ಲಿ  ಕಾರ್ಯನಿರತರಾಗಿರುವ ಪತ್ರಕರ್ತರಿಗೆ ಊಟ, ತಿಂಡಿ ಸಮಯಕ್ಕೆ ಲಭಿಸದೇ ಇರುವ ವಿಚಾರ ಪತ್ರಕರ್ತರ ಸಂಘದ ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ  ಎ.30 ರಿಂದ  ಪತ್ರಕರ್ತರಿಗೆ ಪತ್ರಿಕಾ ಭವನದಲ್ಲಿ ಗಂಜಿ ಊಟದ ವ್ಯವಸ್ಥೆ ಮಾಡಲಾಗಿದೆ.

ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟ ಇದರ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಈ ಕುರಿತು ಮಾಹಿತಿಗಾಗಿ ಭಾಸ್ಕರ ರೈ ಅವರನ್ನು ಸಂಪರ್ಕಿಸಬಹುದು (ಮೊ 91 97411 58710).

ಪ್ರತಿನಿತ್ಯ ಮಧ್ಯಾಹ್ನ 12:30ರಿಂದ 2:00 ಗಂಟೆ ತನಕ ಗಂಜಿ ಊಟ ಲಭ್ಯ ಇರುತ್ತದೆ.  ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾಗಿರುವ ವಿವಿಧ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರು ಗಂಜಿ ಊಟದ ಪ್ರಯೋಜನ ಪಡೆದುಕೊಳ್ಳಬಹುದು.

ಎಚ್ಚರಿಕೆ ವಹಿಸಿ:

 ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ವಿಚಾರದಲ್ಲಿ ಪತ್ರಕರ್ತರು ತಮ್ಮ ಆರೋಗ್ಯದ ರಕ್ಷಣೆ ವಿಚಾರದಲ್ಲಿ ಕಾಳಜಿ ವಹಿಸಬೇಕಾಗಿದೆ. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಡೆಗೆ ಗಮನ ಹರಿಸಬೇಕಾಗಿದೆ. 

ಪತ್ರಕರ್ತರಿಗೆ  ಆರೋಗ್ಯದ ವಿಚಾರದಲ್ಲಿ ಏನಾದರೂ ಸಮಸ್ಯೆ ಉಂಟಾದರೆ  ಸಂಘದ ಅಧ್ಯಕ್ಷರನ್ನು ಅಥವಾ ಪ್ರಧಾನ ಕಾರ್ಯದರ್ಶಿಯವರನ್ನು  ಸಂಪರ್ಕಿಸಿ ನೆರವು ಪಡೆಯಬಹುದು ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಹಾಗು ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.