ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 54ನೆ ವರ್ಷದ ಪಟ್ಟಾಭಿಷೇಕ ವರ್ಧಂತ್ಯುತ್ಸ ವಆಚರಣೆಯ ಸಂದರ್ಭ ಶುಕ್ರವಾರ ಬೆಳ್ತಂಗಡಿ ತಾಲ್ಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು ಧರ್ಮಸ್ಥಳಕ್ಕೆ ಬಂದು ಹೆಗ್ಗಡೆಯವರಿಗೆ ಶ್ರದ್ಧಾ - ಭಕ್ತಿಯಿಂದ ಗೌರವಾರ್ಪಣೆ ಮಾಡಿದರು.

ತಹಸೀಲ್ದಾರ್ ಮಹೇಶ್‍ ಜೆ. ನೇತೃತ್ವದಲ್ಲಿ ಬಂದತಂಡದಲ್ಲಿತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಕರ, ಮುಖ್ಯ ಪಶುವೈದ್ಯಾಧಿಕಾರಿಡಾ. ಮಂಜುನಾಯ್ಕ್, ತಾಲ್ಲೂಕು ಆರೋಗ್ಯಾಧಿಕಾರಿಡಾ.ಕಲಾಮಧು, ಆಡಳಿತ ವೈದ್ಯಾಧಿಕಾರಿಡಾ.ವಿದ್ಯಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ. ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಸಹಾಯಕಕಾರ್ಯನಿರ್ವಹಣಾ ಅಭಿಯಂತರ ಸೂರ್ಯ ನಾರಾಯಣ ಭಟ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಯ ರಾಜ ಜೈನ್, ಡಾ.ಜಯಕೀರ್ತಿಜೈನ್ ಧರ್ಮಸ್ಥಳ, ಅಕ್ಷರದಾಸೋಹದ ಸಹಾಯಕ ನಿರ್ದೇಶಕಿತಾರಕೇಸರಿ ಮೊದಲಾದವರು ಉಪಸ್ಥಿತರಿದ್ದರು,.