ಚೀನಾ ಈಗ ಬಾಹ್ಯಾಕಾಶ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ಮುಂದೆ ಹೋಗಿದ್ದು, ಲೋಕ ಶಕ್ತಿ ಆಗಿರುವುದರಿಂದ ನಾವು ಕಡೆಗಣಿಸಿ ಕೂತುಕೊಳ್ಳಲಾಗದು ಎಂದು ರಕ್ಷಣಾ ಇಲಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಹೇಳಿದರು.
1971ರ ಯುದ್ಧ ವಿಜಯದ ಬಂಗಾರದ ಹಬ್ಬ ನಿಮಿತ್ತ ಬೆಂಗಳೂರು ಜಕ್ಕೂರಿನ ವಾಯು ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಚೀನಾ ಇಂದು ಬಾಹ್ಯಾಕಾಶದಲ್ಲು 281 ಉಪಗ್ರಹಗಳನ್ನು ಹೊಂದಿದೆ. ಯುಎಸ್ ಬಳಿಕ ಎರಡನೆಯ ಸ್ಥಾನ. ಅದರ ಮೂಲಕ ಲೋಕ ಸೇವೆ ಗಮನಿಸುವಿಕೆ ನಡೆದಿದೆ. ಭಾರತವು 33 ಉಪಗ್ರಹಗಳನ್ನು ಹೊಂದಿದೆ.
ಚೀನಾವು 120 ದೇಶಗಳಿಗೆ ಐಟಿ- ಮಾಹಿತಿ ತಂತ್ರಜ್ಞಾನ ಸೇವೆ ಒದಗಿಸುತ್ತಿದೆ. ಆ ಮೂಲಕ ಸಾಕಷ್ಟು ಲೋಕ ಹಿಡಿತ ಸಾಧಿಸಿದೆ. ಚೀನಾ ಕ್ಷಿಪಣಿ ಕ್ಷೇತ್ರದಲ್ಲಿ ಸಹ ಮುಂದೆ ಇದೆ. ಭಾರತವು ಇವನ್ನು ಲೆಕ್ಕದಲ್ಲಿ ಇಟ್ಟುಕೊಂಡು ತನ್ನ ಸೇನಾ ಶಕ್ತಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.