ಗೋವುಗಳ ಸಾಕುತಲಿ ಪೋಷಿಸುತ ನಡೆಯುವರು 

 ನೋವುಗಳ ನೀಡದಲೆ ಸಾಗುತಿಹರು   

 ಮಾವಿನದು ಚಿಗುರನ್ನು ಕಂಡಂತೆ ಸಂತಸದಿ 

 ಸಾವನದು ಬಯಸದಲೆ ಲಕ್ಷ್ಮಿ ದೇವಿ.......

ಮೇಲಿನ ಮುಕ್ತಕದಂತೆ ನಮ್ಮ ರೈತರು ಗೋವುಗಳನ್ನು ಪ್ರೀತಿಯಿಂದ ಸಾಕುತ್ತಾರೆ . ಮಕ್ಕಳಂತೆ ಆ ಗೋವುಗಳನ್ನು ಪೋಷಿಸುತ್ತಾರೆ. ಯಾವುದೇ ರೀತಿಯ ನೋವುಗಳನ್ನು ಆ ಮೂಕ ಪ್ರಾಣಿಗಳಿಗೆ ನೀಡದಂತೆ ಕರುಗಳನ್ನು ಕಂಡು ಸಂತಸವನ್ನು ಪಡುತ್ತಾರೆ. ಆ ಗೋವುಗಳ ಸಾವುಗಳನ್ನು ಬಯಸಿದಲೇ ತಾಯಿಯ ರೀತಿ ಪೋಷಿಸುತ್ತಾರೆ. ಏಕೆಂದರೆ ಹಾಲು ಅಮೃತಕ್ಕೆ ಸಮಾನ. ಎಷ್ಟು ಮಕ್ಕಳ ಜನನದ ನಂತರ ತಾಯಿಯನ್ನು ಕಳೆದುಕೊಂಡಾಗ ಆ ತಾಯಿಯ ಎದೆ ಹಾಲು ಇಲ್ಲದಿದ್ದಾಗ ಅಮೃತಕ್ಕೆ ಸಮಾನವಾದಂತಹ ಹಸುವಿನ ಹಾಲನ್ನು ಕುಡಿಸಿ ಮಕ್ಕಳನ್ನು ಸಾಕುತ್ತಾರೆ. ಅಂತಹ ಪವಿತ್ರವಾದಂತಹ ಭಾಗವಾಗಿರುವ ಗೋವುಗಳು ಹಾಲು ಬಹಳ ವಿಶೇಷತೆಯನ್ನು ಒಳಗೊಂಡಿರುತ್ತದೆ. ಭಾವನಾತ್ಮಕ ವಾದಂತಹ ಸಂಬಂಧವನ್ನು ನಮ್ಮ ಜನಸಾಮಾನ್ಯರು ಹೊಂದಿದ್ದಾರೆ. ಗೋವುಗಳನ್ನು ತಾಯಿಯ ರೀತಿಯಲ್ಲಿ ಪೋಷಿಸುತ ಅದಕ್ಕೆ ಗೌರವಿಸುತ್ತಾ ಪೂಜಿಸುವುದು ನಮ್ಮ ಹಿಂದೂ ಧರ್ಮದ ವಿಶೇಷವಾದಂತಹ ಪದ್ಧತಿಯಾಗಿದೆ.

ಇಂತಹ ಗೋವುಗಳನ್ನು ಆಧಾರವಾಗಿಟ್ಟುಕೊಂಡು ಡಾ. ಸುರೇಶ ನೆಗಳಗುಳಿ ರವರು " ಗೋಗೀತೆ"ಎಂಬ ಹನಿಗವನದ ಸಂಕಲನವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಈ ಗೋಗೀತೆಯನ್ನು ಶ್ರೀ ರಾಘವೇಶ್ವರ ಸ್ವಾಮಿಗಳ ಪ್ರೇರಣೆಯಿಂದ ರಚಿಸಿದ್ದು. ಮಠದಲ್ಲಿ ಈ ಕೃತಿಯನ್ನು  ಹಲವರಿಗೆ ನೀಡಿದ್ದಾರೆ. ಈ ಗೋಗೀತೆಯೂ 44 ಪುಟಗಳನ್ನು ಒಳಗೊಂಡಿದ್ದು. ನೂರಾರು ಹನಿಗವನಗಳನ್ನು ಒಳಗೊಂಡಿದೆ. ಬೆಲೆಯು ರೂ. 30ಗಳಾಗಿದ್ದು. ಆಗಸ್ಟ್ 2018ರಲ್ಲಿ ಲೋಕಲ್ಪನೆಗೊಂಡಿದೆ.

ಕೃತಿಯ  ಪ್ರಾಯೋಜಕರು " ಮನಮೋಹನ ಎಚ್ ಜಿ. ರವರು ಆಗಿದ್ದು. ಕೃತಿಯು  ತೆರೆದ ನಂತರದಲ್ಲಿ ನನ್ನ ಮಾತುಗಳು ಎಂಬ ಲೇಖಕರ ಮಾತುಗಳನ್ನು ಕಾಣಬಹುದು. ವೃತ್ತಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ಸಹ ಪ್ರವೃತ್ತಿಯಲ್ಲಿ ಸಾಹಿತ್ಯ ಸಕ್ತರಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಕರಗತಗೊಳಿಸಿಕೊಂಡು ಪ್ರಸ್ತುತ ದಿನಮಾನಗಳಲ್ಲಿ ಎಲ್ಲಾ ಪ್ರಕಾರಗಳನ್ನು ರಚಿಸುವ ಸಾಹಿತಿಗಳಾಗಿದ್ದಾರೆ.ಕೃತಿಯ ಮೊದಲು ಪ್ರಾರಂಭವಾಗುವ "ನನ್ನ ಮಾತು" ಗಳಲ್ಲಿ ಅವರಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು ನಂತರ ಪ್ರಾರಂಭವಾಗುವ ಹನಿಗವನಗಳನ್ನು ಗಮನಿಸಿದರೆ ಬಹಳಷ್ಟು ಮನಸ್ಸಿಗೆ ಮುದವನ್ನು ನೀಡುತ್ತದೆ.

" ಹಸುವಿರಲು ದೇವರನು 

 ಮರೆತರು ಕೆಡುಕಲ್ಲ 

 ದೇವರೇ ಜೊತೆಗಿರುವ 

 ಭಾಗ್ಯ ಎಂದೆಂದು 

 ಭಗವಂತ ನೋಡನಿರುವ 

 ಸವಲತ್ತು ಪಡೆಯುವೆಡೆ 

 ಮನಮಾಡು ಧೀರತಮ್ಮ"...

 ಈ ಮೇಲಿನ ಕವನದ ಸಾರವೆಂದರೆ ಹಸುವನ್ನು ದೇವರ ರೀತಿಯಲ್ಲಿ ನಾವು ಕಾಣುತ್ತೇವೆ. ಅದನ್ನು ಮರೆತು ನಾವು ಜೀವನ ಮಾಡಲು ಸಾಧ್ಯವೇ ಇಲ್ಲ. ಅಂತಹ ಹಸಿವು ನಮ್ಮ ಜೊತೆಯಲ್ಲಿದ್ದರೆ ದೇವರ ರೂಪದಲ್ಲಿ ಇರುವುದು. ಅದು ನಮ್ಮ ದೊಡ್ಡ ಭಾಗ್ಯವೆಂದು ತಿಳಿಯಬೇಕು. ಹಲವು ಸವಲತ್ತನೂ ನೀಡುವಂತಹ ಭಗವಂತ ಎಲ್ಲವನ್ನು ಗಮನಿಸುತ್ತಿರುತ್ತಾನೆ. ಅದನ್ನು ಪಡೆಯುವ ಕಡೆ ಗಮನವನ್ನು ಹರಿಸು ಎಂದು ತಿಳಿಸಿದ್ದಾರೆ. ನಂತರದ ಹನಿಗವನವೆಂದರೆ 

"ಪಶು ಎಂಬ ನಾಮಧೇಯ

 ದೈನ್ಯ ಪ್ರಾಣಿಗೇರುವುದು  

 ಅಸುಬನೀಗುವಂಥ ನೀಚ 

 ಕೃತ್ಯವದಕೆ ಸಲ್ಲದು"....

 ಈ ಕವನದಲ್ಲಿ ಪಶು ಎಂಬ ನಾಮವನ್ನು ನೀಡಿ. ಅದು ಒಂದು ಪ್ರಾಣಿ ಅದು ನಮ್ಮ ಹಸಿವನ್ನು ನೀಗಿಸುತ್ತದೆ. ಗೋ ಹತ್ಯೆಗಳೆಂಬ ಕೃತ್ಯಗಳನ್ನು ಮಾಡಿ ಪಾಪ ಕಟ್ಟಿಕೊಳ್ಳಬಾರದು ಎಂಬುದನ್ನು ತಿಳಿಸಿದ್ದಾರೆ.

"ದೇಶ ನಮ್ಮದು ನಮ್ಮದು 

 ನಾಡು ಎನ್ನುವ ಹಾಗೆಯೆ 

 ಹಸುವಿನ ಹಾಡು 

 ನಮ್ಮದೆ ಪ್ರಕೃತಿ ನಮಗದು ಒಪ್ಪು 

 ವಿದೇಶಿ ಎಂಬುದು ಎಂದಿಗು ತಪ್ಪು"....

 ನಮ್ಮ ದೇಶ ಇದು. ಈ ದೇಶ ನಾಡು-ನುಡಿಗೆ ಪ್ರಸಿದ್ಧವಾಗಿದ್ದು. ಇಲ್ಲಿ ಹಸುವನ್ನು ಕುರಿತಾದಂತಹ ಹಾಡು ಇದೆ. ಈ ಪ್ರಕೃತಿ ನಮ್ಮದು. ನಮಗದು ಒಪ್ಪಿಕೊಂಡು ಅಚ್ಚು ಮೆಚ್ಚಾಗಿದೆ. ವಿದೇಶಿಗರು ಸಹ ಇಲ್ಲಿ ಬಂದು ನಮ್ಮ ಪ್ರಕೃತಿಯನ್ನು ನೋಡುತ್ತಾರೆ. ಆಚಾರವನ್ನು ನಾವು ಅನುಸರಿಸದಿದ್ದರೆ ಸಾಕು. ಆಚರಿಸಿದರೆ ಅದು ತಪ್ಪಾಗುತ್ತದೆ ಎಂಬುದನ್ನು ತಿಳಿಸಿದ್ದಾರೆ .

" ವಿಟಮಿನ್ ಡಿ ಎಂದರೇನೆ 

 ಮೂಳೆಯ ಜನಕ ದೇಸಿ

 ಹಸುವಿನ ಹಾಲು ಅದಕ್ಕೆ ಕನಕ "

 ಬಹಳಷ್ಟು ಅರ್ಥಪೂರ್ಣವಾಗಿ ಈ ಮೇಲಿನ ಸಾಲುಗಳನ್ನು ನೀಡಿದ್ದಾರೆ. ಹಸುವಿನ ಹಾಲಿನಲ್ಲಿ ನಮಗೆ ವಿಟಮಿನ್ ಡಿ ಸಿಗುತ್ತದೆ ಎಂದು ತಿಳಿಸುತ್ತಾ. ದೇಸಿ ಹಸುಗಳ ಹಾಲು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಎಂದು ತಿಳಿಸಿದ್ದಾರೆ. ಅದು ಎಲ್ಲರಿಗೂ ಪ್ರಿಯವಾದದ್ದು ಎಂದು ತಿಳಿಸಿದ್ದಾರೆ. ಅದು ಚಿನ್ನದಂತೆ ಬೆಲೆಬಾಳುವಂತಹ ಮೌಲ್ಯಯುತವಾದಂತಹ ಅಮೃತವಾಗಿದೆ ಎಂದು ತಿಳಿಸಿದ್ದಾರೆ.

"ಹಸಿವೆ ಬದುಕಿನ ಬಂಡಿ 

ಹಸುವದರ ಸಾಹೇಬ

ಹರಣಕೋ ಸ್ಮರಣಕೋ 

ಜೀವ ನದಿ ಹರಿದಾಡೆ 

ಪೊರೆ ನಲುವಿನಿಂದದನು ಧೀರತಮ್ಮ...

 ನಮಗೆ ದಿನನಿತ್ಯದಲ್ಲಿ ಮುಖ್ಯವಾಗಿ ಹಾಲಿನ ಅವಶ್ಯಕತೆ ಇದ್ದೇ ಇರುತ್ತದೆ. ನಮ್ಮ ದಿನನಿತ್ಯದ ಬೇಡಿಕೆಯ ಅಮೂಲ್ಯವಾದಂತಹ ಅಮೃತವಾಗಿದೆ. ನಮ್ಮ ಹಸಿವನ್ನು ನೀಗಿಸುವ ಹಸುವು ನಮಗೆ ಸಾಹೇಬನಾಗಿರುತ್ತದೆ . ಇದು ಜೀವನದ ಪ್ರಮುಖವಾದ ಹಂತದಲ್ಲಿ ಒಳಗೊಂಡಿದೆ .ಹಸುವನ್ನು ಬಹಳಷ್ಟು ಪ್ರೀತಿಯಿಂದ ತೊರೆಯಬೇಕಿದೆ ಎಂದು ತಿಳಿಸಿದ್ದಾರೆ.

 "ಹಸುವ ಮಾಂಸದ ಖಾದ್ಯ ಎಷ್ಟು 

ರುಚಿಯಾದರೂ 

ಸೇವಿಸುವ ತೇಗುವುದು 

ಕಾಣಸಿಗದು ಮತ್ತೇಕೆ 

ಕ್ರೂರ ಪ್ರಾಣಿಯಂತೆಯೇ 

ಮನುಜ ಕಡಿದು 

ತಿನ್ನುವುದು ವೇದ್ಯವೇ ಧೀರತಮ್ಮ... 

 ಇಂದು ಧರ್ಮದ ವಿರೋಧಿಗಳಾದ ಎಷ್ಟೋ ಜನರು ಹಸುವನ್ನು ಕೊಂದು ಅದರ ಮಾಂಸವನ್ನು ಸೇವಿಸುತ್ತಾರೆ 

 ತಾಯಿಯಂತೆ ಭಾವಿಸುವ ನಮಗೆ ಅಂತಹ ಘಟನೆಗಳನ್ನು ಕಾಣ ಬಾರದು ಎಂದರು ಅಂತಹ ದೃಶ್ಯಗಳನ್ನು ಕಾಣುತ್ತೇವೆ. ಕ್ರೂರ ಪ್ರಾಣಿಯಂತೆ ವರ್ತಿಸಿ ಮನುಜ ಹಸುವನ್ನು ಕಡೆದು ಮಾಂಸವನ್ನು ತಿನ್ನುತ್ತಾರೆ. ಅದು ಸರಿಯಲ್ಲ ಎಂದು ತಿಳಿಸಿದ್ದಾರೆ 

ಕೊನೆಯ ಕವಿತೆ ಯಾದ 

"ನಂದಿನಿಯ ಪ್ಯಾಕೆಟ್ಟು ಹೆಸರು ಮಾತ್ರಕೆ ಒಪ್ಪ

 ನಿಜದ ನಂದಿನಿ ಮನೆಯ ಹಟ್ಟಿಯಲಿ ಇಪ್ಪ.

ಚಿಕ್ಕ ಧನವಿದು ಸಾಕಲೇನಿಲ್ಲ ಕಷ್ಟ 

ಚೊಕ್ಕ ಆಹಾರಕ್ಕಿದರ ಹಾಲು ಸ್ವಾದಿಷ್ಟ.....

 ನಮಗೆ ಹಸುವಿನ ಹಾಲನ್ನು ಪಡೆಯುವುದಾದರೆ ನಂದಿನಿ ಪ್ಯಾಕೆಟ್ ಅನ್ನು ಬಳಸುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಇಂತಹ ಹಾಲಿನ ಉತ್ಪಾದನೆಯಲ್ಲಿ ನಂದಿನಿ ಪ್ಯಾಕೆಟ್ ಹೆಸರುವಾಸಿಯಾಗಿದೆ. ಅದನ್ನು ಹೊರತುಪಡಿಸಿ ಸರ್ವೇ ಸಾಮಾನ್ಯವಾಗಿ ನಮ್ಮ ಮನೆಯ ಮುಂದೆ ಇರುವಂತಹ ಹಸುವಿನಿಂದ ಹಾಲನ್ನು ಪಡೆದರೆ ಎಷ್ಟು ಚೆಂದ ಎಂದು ತಿಳಿಸಿದ್ದಾರೆ. ಸ್ವಲ್ಪ ಪ್ರಮಾಣದ ಆದಾಯವನ್ನು ಹಾಕಿ ಹಸುವನ್ನು ಸಕುತ್ತಾರೆ ನಾವು ಮಾಡುವಂತ ಆಹಾರಕ್ಕೆಲ್ಲ ಇದರ ಹಾಲನ್ನು ಬಳಸುತ್ತೇವೆ ಎಂದು ತಿಳಿಸಿದ್ದಾರೆ. ಹೀಗೆ ಹನಿಗವನವು ಮುಗಿದು ನಂತರದಲ್ಲಿ ಬೆನ್ನುಡಿಯನ್ನು ಮನಮೋಹನ ಎಚ್ ಜಿ. ಮುಂಬೈ ಇವರು ಬರೆದಿದ್ದಾರೆ. ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿರುವ ಶ್ರೀ ಡಾ. ನೆಗಳಗುಳಿರವರು ಇನ್ನೂ ಹೆಚ್ಚಿನ ಕೃತಿಗಳನ್ನು ಲೋಕಾರ್ಪಣೆಗೊಳಿಸಲೆಂದು ಆಶಿಸುತ್ತಾ. ಶುಭವಾಗಲಿ ಎಂದು ಹಾರೈಸುತ್ತೇನೆ.

ಹೆಚ್. ಎಸ್. ಪ್ರತಿಮಾ ಹಾಸನ್.

ಸಾಮಾಜಿಕ ಚಿಂತಕಿ. ಶಿಕ್ಷಕಿ. ಹಾಸನ.