ಮಂಗಳೂರು: ದಿನಾಂಕ 28/11/2021ರಂದು ದ.ಕ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಸಭಾಭವನ ಕಡೆಮೊಗರುನಲ್ಲಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಸ್ಟರ್ ಕೀ ಸಂಸ್ಥೆಯ ಮಾಲಕರಾದ ವಿನ್ಸೆಂಟ್ ಲೋಬೋ, ಕಾಂಚನಾ ಮೋಟಾರ್ಸ್ ಸಂಸ್ಥೆಯ ಮಾಲಕರಾದ ಪ್ರಸಾದ್ ಕಾಂಚನ್, ಮಂಗಳಾದೇವಿ spare partsನ ಮಾಲಕರಾದ ಸಂತೋಷ್ ರಾವ್,golden oilನ ರಾಜೇಶ್, ಜಿಲ್ಲಾ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್, ಸಂಘದ ನಿರ್ಮಾತೃ, ಸ್ಥಾಪಕ ಕಾರ್ಯದರ್ಶಿ, ಚೇರ್ಮನ್, ಜನಾರ್ಧನ ಎ. ಅತ್ತಾವರ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ, ಕೋಶಾಧಿಕಾರಿ ರಾಜಗೋಪಾಲ್, ಹಿರಿಯ ನಿರ್ದೇಶಕರುಗಳಾದ ಪುಂಡಲೀಕ ಸುವರ್ಣ,ರುಕ್ಮಯ್ಯ ಗೌಡ, ದಿವಾಕರ್ ಇವರುಗಳ ಉಪಸ್ಥಿತಿಯಲ್ಲಿ ಅತಿಥಿಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಅಟೋ ಇಲೆಕ್ಟ್ರಿಕಲ್ಸ್ ನ ಮಾಲಕರಾದ ಶ್ರೀ ಗಿರೀಶ್ ಕುಮಾರ್ ಸೇವಾ ರತ್ನ ಪ್ರಶಸ್ತಿ ಹಾಗೂ ಮಾಜಿ ಕೋಶಾಧಿಕಾರಿ ಶ್ರೀ ಗೋಪಾಲ್ ಸಮಾಜರತ್ನ ಪ್ರಶಸ್ತಿ ಯೊಂದಿಗೆ ಗೌರವಿಸಲ್ಪಟ್ಟರು.
ಈ ಸಮಯದಲ್ಲಿ ವ್ರತ್ತಿ ಬಾಂಧವರ ಪ್ರತಿಭಾನ್ವಿತ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಚೇರ್ಮನ್ ಜನಾರ್ಧನರವರು ಸಂಘದ ಕಾರ್ಯವೈಖರಿಯನ್ನು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮನಮುಟ್ಟುವಂತೆ ಸಭೆಯಲ್ಲಿ ತೆರೆದಿಟ್ಟರು.ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ ವಂದನಾರ್ಪಣೆಗೈದರು.