ಚಳಿಗಾಲದ ಅಧಿವೇಶನಕ್ಕೆ ಮೊದಲ ದಿನದ ಸರ್ವ ಪಕ್ಷಗಳ ಸಭೆಗೆ ಹಾಜರಾಗದ ಪ್ರಧಾನಿ ಮೋದಿಯವರ ವಿರುದ್ಧ ದೆಹಲಿಯಲ್ಲಿ ಪ್ರತಿಪಕ್ಷಗಳ ಟೀಕಾ ಪ್ರಹಾರ ನಡೆಯಿತು.
ಆಳುವ ಪಕ್ಷದ ಪರ ರಾಜನಾಥ ಸಿಂಗ್, ಪೀಯೂಸ್ ಗೋಯಲ್ ಮೊದಲಾದವರು ಹಾಜರಿದ್ದರು. ಕೃಷಿ ಕಾಯ್ದೆ ಬೇರೆ ರೂಪದಲ್ಲಿ ಬಾರದಂತೆ ತಡೆಯಬೇಕಾಗಿದೆ. ಚರ್ಚಿಸಲು ಪ್ರಧಾನಿಯೇ ಇಲ್ಲ ಎಂದರು ಮಲ್ಲಿಕಾರ್ಜುನ ಖರ್ಗೆ. ಪ್ರಶ್ನೆ ಕಂಡರೆ ಓಡುವ ಪ್ರಧಾನಿ ಮೊದಲೇ ಬಾರದಿರುವ ನಿರ್ಧಾರ ಮಾಡಿದ್ದಾರೆ ಎಂದು ಶಿವಸೇನೆ, ಡಿಎಂಕೆ ಪಕ್ಷಗಳ ರಾವುತ್, ಬಾಲು ಮೊದಲಾದವರು ಹೇಳಿದರು.