ಲೊರೆಟ್ಟೊ: ಲೊರೆಟ್ಟೊ ಚಚಿ೯ನ ಯುವಜನರು ಹಾಗು ವಯಸ್ಕರು ಸೇರಿ ಸುಮಾರು 150 ಮಂದಿ ಭಾಗವಹಿಸಿದರು. ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ನಾಯಕ್ ಮುಲ್ಕಿ ಇವರು ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವವನ್ನು ಹಂಚಿದರು.

ಅವರು ಮಾತನಾಡಿ, ಬೇರೆ ಬೇರೆ ರೀತಿಯ ಮಾದಕ ದ್ರವ್ಯಗಳ ಬಗ್ಗೆ ಉದಾಹರಣೆಯ ಸಹಿತ ನೈಜ ಸಮಾಜದ ಘಟನೆಯ ಬಗೆಗಿನ ಮಾಹಿತಿಗಳನ್ನು ಹಂಚಿದರು. ಮಾದಕ ದ್ರವ್ಯಗಳು ನಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು, ತಮ್ಮದು ಮಾತ್ರವಲ್ಲದೆ ಇಡೀ ಕುಟುಂಬದ ಸವ೯ನಾಶ ಆಗುವುದು ಖಚಿತ ಎಂದು ಉಲ್ಲೇಖಿಸಿದರು.

ಮುಂದಿನ ಪೀಳಿಗೆಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ. ಮಕ್ಕಳನ್ನು ಬೆಳೆಸುವ ರೀತಿಯ ಬಗ್ಗೆ ಪೋಷಕರು ಗಮನ ಹರಿಸುವುದು ಅಗತ್ಯ, ಯುವಜನಾಂಗವು ಒಂದು ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಉಪದೇಶಿಸಿದರು. ಸಾಮಾಜಿಕ ಪೈಪೋಟಿಯನ್ನು ಮಕ್ಕಳ ಮೇಲೆ ಹೊರಿಸಿ ಅವರ ಸವ೯ತೋಮುಖ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಹೀಗಾಗಿ ನಮ್ಮ ಯುವಜನರು ದಾರಿ ತಪ್ಪುವುದನ್ನು ತಡೆಯುವುದು ಹೆತ್ತವರ ಕತ೯ವ್ಯ ಎಂದು ಪ್ರತಿಪಾದಿಸಿದರು.
ಲೊರೆಟ್ಟೊ ಚಚಿ೯ನ ಧಮ೯ಗುರುಗಳಾದ ವಂದನೀಯ ಫಾ.ಫ್ರಾನ್ಸಿಸ್ ಕ್ರಾಸ್ತಾ, ಲೊರೆಟ್ಟೊ ಶಾಲೆಯ ಮುಖ್ಯ ಶಿಕ್ಷಕರಾದ ವಂದನೀಯ ಫಾ.ಜೇಸನ್ ಮೊನಿಸ್ ಹಾಜರಿದ್ದರು.