ಮಂಗಳೂರು: ಗುಂಡ್ಯ ಶಿರಿಬಾಗಿಲು ಗ್ರಾಮದ ಬಾರ್ಯ ನಿವಾಸಿ ತೇಜ ಕುಮಾರ್ ಬಿ (28) ಎಂಬವರು ನಗರದ ಬಿಕರ್ನಕಟ್ಟೆ ಕಂಡೆಟ್ಟು ಎಂಬಲ್ಲಿ  ವಾಸವಾಗಿದ್ದು, ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿಕೊಂಡಿದ್ದರು. ಅವರು ತಾಯಿಗೆ ಫೋನ್  ಮಾಡಿ ಕಂಪೆನಿಯ ಮೀಟಿಂಗ್ ಇರುವುದರಿಂದ 2023 ರ ಜೂನ್ 7ರಂದು ರಾತ್ರಿ  ಬೆಂಗಳೂರಿಗೆ ಹೋಗಲು ಇರುವುದಾಗಿ ಹೇಳಿ ಬೆಂಗಳೂರಿಗೆ ಹೋಗದೇ, ಮನೆಗೂ ಬಾರದೇ ಕಾಣೆಯಾಗಿರುವ ಬಗ್ಗೆ ಕಂಕನಾಡಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

ಕಾಣೆಯಾದವರ  ಚಹರೆ: ಎತ್ತರ 5.6 ಅಡಿ, ಎಣ್ಣೆ ಕಪ್ಪು ಮೈ ಬಣ್ಣ, ಸಪೂರ ಶರೀರ, ಕೋಲು ಮುಖ, ಮೀಸೆ ಹಾಗೂ ಗಡ್ಡ ಇರುತ್ತದೆ. ಕಾಣೆಯಾದ ದಿನ ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್  ಧರಿಸಿದ್ದರು. ಕನ್ನಡ, ತುಳು, ಹಿಂದಿ, ಇಂಗ್ಲೀಷ್   ಭಾಷೆ ಮಾತನಾಡುತ್ತಾರೆ.

ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಪೋಲಿಸ್  ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.