ಮಂಗಳೂರು: ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ಅ. 13 ರಿಂದ 18 ರ ವರೆಗೆ ನಡೆದ ಗೃಹರಕ್ಷಕಿಯರ “ನಿಸ್ತಂತು ಚಾಲನಾ ತರಬೇತಿ”ಯಲ್ಲಿ ಕರ್ನಾಟಕ ರಾಜ್ಯದ 27 ಜಿಲ್ಲೆಯ ಗೃಹರಕ್ಷಕರು ಭಾಗವಹಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಘಟಕದ ಗೃಹರಕ್ಷಕಿಯರಾದ ಮೆರಿಟಾ ಡಿ’ಸೋಜ, ಮತ್ತು ದಿವ್ಯಾ ಇವರು ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿರುತ್ತಾರೆ. ಚಿನ್ನದ ಪದಕ ವಿಜೇತರಾದ ಮೆರಿಟಾ ಡಿ’ಸೋಜ ಇವರಿಗೆ ಎ.ಎಸ್.ಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ  ಅನಿಲ್ ಕುಮಾರ್ ಎಸ್. ಬೂಮರೆಡ್ಡಿ ಅಭಿನಂದಿಸಿದರು.