ತಮಿಳುನಾಡಿನ ನೀಲಗಿರಿ ಪ್ರಾಂತ್ಯದ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದರಿಂದ ಎಂಟು ಜನ ದುರ್ಮರಣಕ್ಕೀಡಾದರೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ತೀವ್ರ ಗಾಯಗೊಂಡು ನೀಲಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿ 11 ಜನರು ಹೆಲಿಕಾಪ್ಟರ್‌ನಲ್ಲಿ ಕೊಯಮುತ್ತೂರು ಸೇನಾ ಕಾರ್ಯಕ್ರಮಕ್ಕೆ ಹೊರಟಿದ್ದರು.
ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಹೆಲಿಕಾಪ್ಟರ್ ಪತನವಾಗಿದೆ. ಎಂಟು ಶವಗಳು ಸ್ಥಳದಲ್ಲಿ ದೊರೆತಿವೆ. ಬಿಪಿನ್ ರಾವತ್ ಸಹಿತ ಮೂವರನ್ನು ನೀಲಗಿರಿ ಆಸ್ಪತ್ರೆಗೆ ಸೇರಿಸಲಾಯಿತು. ಒಬ್ಬರಿಗಾಗಿ ಅವಶೇಷಗಳಡಿ ಹುಡುಕಾಟ ನಡೆದಿದೆ.