ಮಂಗಳೂರಿನ ಮೋರ್ಗನ್ ರಸ್ತೆಯಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದು ಗಂಡನು ಹೆಂಡತಿ ಮಕ್ಕಳಿಗೆ ವಿಷವಿಕ್ಕಿ ಕೊಂದು ತಾನು ನೇಣು ಹಾಕಿಕೊಂಡಿದ್ದಾನೆ.

ಚಾಲಕನಾಗಿದ್ದ ಗಂಡ ಕುಡಿದು ಬಂದು ಹಿಂಸೆ ಕೊಡುವನೆಂದು ಆರು ತಿಂಗಳ ಹಿಂದೆ ಆಕೆ ಓಡಿಹೋಗಿದ್ದಳು. ಅನಂತರ ಮಕ್ಕಳಿಗಾಗಿ ಮಹಿಳಾ ಪೋಲೀಸು ಠಾಣೆಯಲ್ಲಿ ರಾಜಿಯಾಗಿ ಹಿಂತಿರುಗಿದ್ದಳು.

ಬಾಗಲಕೋಟೆ ಜಿಲ್ಲೆಯ ಸುನಗ ಗ್ರಾಮದ ಚಾಲಕ 30ರ ನಾಗೇಶ ಸಿರಗುಪ್ಪಿ, ಸೆಕ್ಯೂರಿಟಿ ಕೆಲಸದ 30ರ ವಿಜಯಲಕ್ಷ್ಮಿ, 8ರ ಸ್ವಪ್ನಾ, 4ರ ಸಮರ್ಥ್ ಮೃತರು.

ನಾಗೇಶ್‌ ಮರಣ ಕಾಗದ ಬರೆದಿದ್ದು, ನನ್ನ ಹೆಂಡತಿ ನೂರ್‌ಜಹಾನ್ ಎಂಬವಳ ಪ್ರಭಾವದಲ್ಲಿ ಇರುವುದಾಗಿ ಬರೆದಿದ್ದ. ಅವರನ್ನು ವಶಕ್ಕೆ ಪಡೆದು ಪೋಲೀಸರು ಇದರ ಹಿಂದೆ ಮತಾಂತರ ಇದೆಯೇ ವಿಚಾರಣೆ ನಡೆಸುತ್ತಿದ್ದಾರೆ.