ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ಉಡುಪಿ ಶ್ರೀ ಪೇಜಾವರ ಮಠ ಇದರ ಮುಂಬಯಿ ಶಾಖೆಯಾದ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದ (ಮಧ್ವ ಭವನದÀ) ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಇಂದಿಲ್ಲಿ ಭಾನುವಾರ ಸರ್ವೈಕಾದಶಿ ದೇವಶಯನಿ, ಪ್ರಥಮನೈಕಾದಶಿ ಅರ್ಥಾತ್ ಆಷಾಢ ಏಕಾದಶಿ ಪ್ರಯುಕ್ತ ಲಕ್ಷ ತುಳಸೀ ಅರ್ಚನೆ, ಭಗವದ್ಗೀತಾ ಪಾಠ, ಭಜನಾ ಕಾರ್ಯಕ್ರಮ, ಪ್ರವಚನ ಇತ್ಯಾದಿಗಳು ವಿಜೃಂಭನೆಯಿಂದ ನಡೆಸಲ್ಪಟ್ಟವು
ತಪ್ತಮುದ್ರಾಧಾರಣ, ಚಾತುರ್ಮಾಸ್ಯಾರಂಭ ಶುಭಾವಸರದಿ ಮಠದ ಶಿಲಾಮಯ ಮಂದಿರದಲ್ಲಿ ಬೆಳಿಗ್ಗೆ ಶ್ರೀಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯ ಮುಖ್ಯ ಆಡಳಿತಾಧಿಕಾರಿ ಡಾ| ರೆಂಜಾಳ ರಾಮದಾಸ ಉಪಾಧ್ಯಾಯ ಅವರು ಪೂಜೆ ನೆರವೇರಿಸಿ ಉಪಸ್ಥಿತ ಭಕ್ತರಿಗೆ ಹರಸಿದರು.
ಈ ಸಂದರ್ಭದಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ಥರು, ಸದಸ್ಯರು, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ವಿದ್ವಾನ್ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ ಹಾಗೂ ಮಠದ ಪುರೋಹಿತ ವರ್ಗ ಮತ್ತು ಸಹ ಆರ್ಚಕರು ಸೇರಿದಂತೆ ಭಕ್ತರನೇಕರು ಹಾಜರಿದ್ದು ಪೂಜಾಧಿಗಳಲ್ಲಿ ಪಾಲ್ಗೊಂಡರು.