ತಾಯ್‌ಲ್ಯಾಂಡಿನ ಬ್ಯಾಂಕಾಕ್ ನಗರದಲ್ಲಿ ನಡೆದ ಏಶಿಯನ್ ಅಥ್ಲೆಟಿಕ್ಸ್‌ನ ಕೊನೆಯ ದಿನ ಭಾರತವು ಬೆಳ್ಳಿ ಹಬ್ಬ ಆಚರಿಸಿತು. ಒಟ್ಟು ಒಟ್ಟು 8 ಬೆಳ್ಳಿ, 5 ಕಂಚಿನ ಪದಕಗಳನ್ನು ಭಾರತ ನಿನ್ನೆ ಜಯಿಸಿತು. ಒಟ್ಟಾರೆ 6 ಚಿನ್ನ, 12 ಬೆಳ್ಳಿ, 9 ಕಂಚು ಎಂದು ಭಾರತವು ಒಟ್ಟಾರೆ 27 ಪದಕಗಳನ್ನು ಗೆದ್ದುಕೊಂಡಿತು.

100 ಮೇಟರ್ ಹರ್ಡಲ್ಸ್‌ನಲ್ಲಿ ಬಂಗಾರದ ಬಾಲೆ ಆಗಿದ್ದ ಜ್ಯೋತಿ ಯರ್ರಾಜಿ ಅವರು 200 ಹರ್ಡಲ್ಸ್‌ನಲ್ಲಿ ರಜತ ವಿಜೇತೆ ಆದರು.  ಆಭಾ ಖತುವಾ ಅವರು ಮಹಿಳೆಯರ ಶಾಟ್ ಪಟ್‌ನಲ್ಲಿ ರಾಷ್ಟ್ರೀಯ ದಾಖಲೆ 18.06 ಮೀಟರ್ ಸರಿಗಟ್ಟಿ ಬೆಳ್ಳಿ ಪಡೆದರು. ಪ್ರಿಯಾಂಕಾ 20 ಕಿಲೋಮೀಟರ್ ಓಟದಲ್ಲಿ ಬೆಳ್ಳಿ ಜಯಿಸಿದರು.