ಮಧ್ಯ ಪ್ರದೇಶದ ದಾತಿಯಾ ಜಿಲ್ಲೆಯ ಉನಾವ್ ಪೋಲೀಸು ಠಾಣೆಯ ವ್ಯಾಪ್ತಿಯಲ್ಲಿ 19ರ ತರುಣಿಯೊಬ್ಬಳನ್ನು ಅಪಹರಿಸಿ ಗುಂಪು ಅತ್ಯಾಚಾರ ಮಾಡಲಾಗಿದೆ.

ಈ ಸಂಬಂಧ ದಾತಿಯಾ ಬಿಜೆಪಿ ಘಟಕದ ಅಧ್ಯಕ್ಷನ ಮಗನ ಸಹಿತ ಮೂವರನ್ನು ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರು. ಒಬ್ಬ ಪರಾರಿಯಾಗಿದ್ದು, ಆತನ ಸುಳಿವು ನೀಡುವವರಿಗೆ ರೂ. 10,000 ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಉನಾವ್ ಪೋಲೀಸು ಠಾಣಾಧಿಕಾರಿ ಯಾದವೇಂದ್ರ ಸಿಂಗ್ ಗುರ್ಜಾರ್ ತಿಳಿಸಿದ್ದಾರೆ.