ದಕ್ಷಿಣ ಕೊರಿಯಾದಲ್ಲಿ ನಡೆದ ಬೂಸಾನ್ ಫಿಲಂ ಫೆಸ್ಟಿವಲ್‌ನಲ್ಲಿ ಬಾಲಿವುಡ್ ನಟಿ ನುಸ್ರತ್ ಬರೂಚಾ ಅವರು ಏಶಿಯಾದ ಅತ್ಯುತ್ತಮ ನಟಿಯಾಗಿ ಆಯ್ಕೆಯಾದರು.
ಕೊರೋನಾ ಲಾಕ್‌ಡೌನ್ ಕಾಲದಲ್ಲಿ ರಾಜ್ ಮೆಹ್ತಾ ನಿರ್ದೇಶನದ ಅಜೀಬ್ ದಾಸ್ತಾನ್ ಚಿತ್ರವು ನೆಟ್ ಫಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. ಅದರ ನಟನೆಗಾಗಿ ನುಸ್ರತ್ ಪ್ರಶಸ್ತಿ ಭಾಜನರಾಗಿದ್ದಾರೆ.
2006ರಿಂದ ಜೈ ಸಂತೋಷಿ ಮಾ, ಲವ್ ಸೆಕ್ಸ್ ಔರ್ ದೋಖಾ, ಪ್ಯಾರ್ ಕಾ ಪಂಚನಾಮಾ, ಡ್ರೀಮ್ ಗರ್ಲ್ ಸಹಿತ 13 ಚಿತ್ರಗಳಲ್ಲಿ ನುಸ್ರತ್ ನಟಿಸಿದ್ದಾರೆ.