ಮೇಘಾಲಯದಲ್ಲಿ ತುರಾದಿಂದ ರಾಜಧಾನಿ ಶಿಲ್ಲಾಂಗ್‌ಗೆ ಹೊರಟಿದ್ದ ಬಸ್ ಮಧ್ಯ ರಾತ್ರಿ ನದಿಗೆ ಉರುಳಿ ಬಿದ್ದ ಕಾರಣ 6 ಜನರು ಸಾವಿಗೀಡಾದರು, ಹಾಗೂ ಗಾಯಗೊಂಡರು.
ನಟ್ಟಿರುಳು 12 ಗಂಟೆಯ ಹೊತ್ತಿಗೆ ನೋಂಗ್ ಚಾಮ್‌ನಲ್ಲಿ ರಿಂಗ್ಚಿ ನದಿಗೆ ಬಸ್ ಉರುಳಿದೆ. ಕೂಡಲೆ ರಕ್ಷಣಾ ಪಡೆ, ತುರ್ತು ಸೇವಾ ದಳಗಳು ನೆರವಿಗೆ ಬಂದಿವೆ. 16 ಜನರನ್ನು ರಕ್ಷಿಸಲಾಗಿದ್ದು, ಕೆಲವರು ಗಾಯಗೊಂಡಿದ್ದಾರೆ. ಆರು ಜನರ ಶವ ಬಸ್ಸಿನೊಳಗೆ ಕಂಡುಬಂದಿದ್ದು, ಒಂದೊಂದಾಗಿ ಮೇಲೆತ್ತಲಾಯಿತು.