ಕೊಂಪದವು: ಪೂಜ್ಯ ಸೇಸು ಗೌಡ ಕುಡುಬಿ ಜಾನಪದ ಕಲಾ ಟ್ರಸ್ಟ್ (ನೋ.) ಇದರ ವತಿಯಿಂದ ನಡೆದ "ಅಟಿoತ್ ಏಕ್ ಐತಾರ್" ಕಾರ್ಯಕ್ರಮವು ಜು. 20 ರಂದು ನಡೆಯಿತು.

ಕುಡುಬಿ ಸಮುದಾಯದ ಹೆಚ್ಚಿನವರು ಕೃಷಿಯನ್ನೇ ನೆಚ್ಚಿಕೊಂಡವರು, ಆಷಾಡ ತಿಂಗಳಿನಲ್ಲಿ ಕೃಷಿ ಚಟುವಟಿಕೆಗಳಿಗೆ ಬಿಡುವು ದೊರೆತಾಗ ಔಷಧೀಯ ಗುಣವುಳ್ಳ, ಪ್ರಕೃತಿಯಲ್ಲಿ ಸಿಗುವ ಸೊಪ್ಪು ತರಕಾರಿಗಳನ್ನು ತಂದು ಬಗೆ ಬಗೆಯ  ಸಾಂಪ್ರದಾಯಿಕ ಶೈಲಿಯಲ್ಲಿ ತಯಾರಿಸಿ ಸೇವಿಸುವ ಪರಿಪಾಠ ಇದೆ. ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಇಂತಹ ತಿಂಡಿ - ತಿನಿಸುಗಳನ್ನು ತಯಾರಿಸಿ ಅದರ ತಯಾರಿಕೆ, ಅದರಲ್ಲಿ ಅಡಕವಾಗಿರುವ ಔಷಧೀಯ ಗುಣಗಳನ್ನು ಇತರರಿಗೆ ತಿಳಿಸಿ ಜಾಗೃತಿ  ಮೂಡಿಸಲಾಯಿತು. 50ಕ್ಕೂ ಹೆಚ್ಚಿನ ವಿವಿಧ ಬಗೆಯ ಹಳ್ಳಿ ಸೊಗಡಿನ ತಿಂಡಿ - ತಿನಿಸುಗಳನ್ನು ಮಾಡಿ ಅದರ ಮಹತ್ವ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಕೊಂಕಣಿ ಕವಿಗೋಷ್ಠಿ ಹಮ್ಮಿಕೊಳ್ಳಲಾಯಿತು. ಬರಹಗಾರರಾದ ಶಿವರಾಮ ಮುಚ್ಚೂರು, ಶ್ಯಾಮಲಾ ವಸಂತ, ಪ್ರೀತಮ್ ಮಿಜಾರು ಇವರು ತಮ್ಮ ಸ್ವ ರಚಿತ ಕವನವನ್ನು ವಾಚಿಸಿದರು. ಮನರಂಜನೆಗಾಗಿ ಗ್ರಾಮೀಣ ಆಟಗಳು ಹಾಗೂ ಕೊಂಕಣಿ ಜಾನಪದ ಹಾಡುಗಳನ್ನು ಹಾಡಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಜನಾರ್ದನ ಗೌಡ, ಹಿರಿಯ ಜಾನಪದ ಕಲಾವಿದರಾದ ನಾರಾಯಣ ಗೌಡ, ಗೌರವ ಸಲಹೆಗಾರರಾದ ಡಾ | ಮನೋಹರ ಗೌಡ,ಟ್ರಸ್ಟಿನ ಸದಸ್ಯರು ಹಾಗೂ ಸಮಾಜದ ಪ್ರಮುಖರು ಉಪಸ್ತಿತರಿದ್ದರು.