ಬಂಟ್ವಾಳ, ಡಿ. 14:  ಇಬ್ಬರು ಮಕ್ಕಳು ತಮ್ಮ ಮನೆಯಿಂದ ಶಾಲೆಗೆ ತೆರಳುತಿದ್ದ ವೇಳೆ ಅಪಹರಣ ಮಾಡಲು ಯತ್ನಿಸಿದ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತಿದ್ದಾರೆ. ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಾಳ ಹಿ.ಪ್ರಾ. ಶಾಲೆಗೆ ಆಗಮಿಸುತಿದ್ದ ವೇಳೆ ಕಾರೊಂದರಲ್ಲಿ ಬಂದು ಮಕ್ಕಳ ಅಂಗಿ ಎಳೆಯಲು ಯತ್ನಿಸಿದ್ದು ಆ ವೇಳೆ ಮಕ್ಕಳ ಅಂಗಿಯ ಗುಬ್ಬಿಗಳು ಎದ್ದು ಹೋಗಿದ್ದರಿಂದ ಮಕ್ಕಳಿಗೆ ಬಚಾವು ಆಗಲು ಸಾಧ್ಯವಾಯಿತು.

Image courtesy

ಘಟನೆಯ ಕುರಿತು ಮಕ್ಕಳ ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಅವರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.