ಸುರತ್ಕಲ್: ಹಿಂಮಸ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಬಂಧನ ವಂಚನೆ, ಬೆದರಿಕೆ ಪ್ರಕರಣದಡಿ ಸುರತ್ಕಲ್ ಪೋಲೀಸರು ಹಿಂದೂ ಮಹಾ ಸಭಾದ ರಾಜ್ಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರನ್ನು ಬಂಧಿಸಿದರು. ಕಾವೂರಿನ ಸುರೇಶ್ ಎನ್ನುವವರು ರಾಜೇಶ್ ಜೊತೆಗೆ ಸ್ರಾನ್ ಇಂಟರ್ ನ್ಯಾಶನಲ್ ಟ್ರೇಡಿಂಗ್ ಸ್ಥಾಪಿಸಲು ಯೋಜಿಸಲಾಗಿತ್ತು. ಆದರೆ ರಾಜೇಶ್ ಪವಿತ್ರನ್‌ರ ಅವ್ಯವಹಾರ ಕಂಡು ಬಂದುದರಿಂದ ಸುರೇಶ್ ಪಾಲುದಾರಿಕೆ ಸಂಬಂಧದಿಂದ ಹಿಂದೆ ಸರಿದರು.

ಕಂಪ್ಯೂಟರ್ ಕಸಿದುಕೊಂಡ ಆರೋಪಿಯು ಅದರ ದತ್ತಾಂಶ ಅಳಿಸುವೆ, ಗುಟ್ಟುಗಳನ್ನೆಲ್ಲ ಹೊರ ಹಾಕುವೆ ಎಂದು ಬೆದರಿಸಿರುವುದಲ್ಲದೆ ಕೈಕಾಲು ಮುರಿಯುವ ದಮಕಿ ಹಾಕಿದ್ದಾರೆ ಎಂದು ಸುರೇಶ್ ದೂರು ನೀಡಿದ್ದರು. ಅದರಡಿ ರಾಜೇಶ್ ಅವರನ್ನು ಬಂಧಿಸಲಾಗಿದೆ. ಅಲ್ಲದೆ ವಂಚನೆಗೆ ಸಹಕರಿಸಿದ್ದಾರೆ ಎನ್ನಲಾದ ಡಾ. ಸನಿಜಾ ವಿರುದ್ಧ ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ.