ಕರ್ನಾಟಕದಲ್ಲಿ ನೆಪದ ಮೇಲೆ ನೆಪ ಹೇಳುತ್ತ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಂದೂಡುತ್ತಿರುವ ಬಿಜೆಪಿ ಸರಕಾರಕ್ಕೆ ಕರ್ನಾಟಕ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿತು. ಕ್ಷೇತ್ರ ಮರು ವಿಂಗಡಣೆ ಹೆಸರಿನಲ್ಲಿ, ಸೀಮಾ ನಿರ್ಣಯ ಸಮಿತಿಯನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರವು ಮೂರ್ಮೂರು ಬಾರಿ ಜಿ. ಪಂ., ತಾ. ಪಂ. ಚುನಾವಣೆ ಮುಂದೂಡಿರುವುದನ್ನು ಚುನಾವಣಾ ಆಯೋಗ ಆಕ್ಷೇಪಿಸಿತ್ತು.

ಇದು ಕಾಲ ಹರಣದ ತಂತ್ರ ಎಂಬ ವಾದವನ್ನು ಒಪ್ಪಿದ ಹೈಕೋರ್ಟ್ ಸರಕಾರಕ್ಕೆ ದಂಡ ವಿಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸುವ ವಿಷಯದಲ್ಲಿಯೂ ಸರಕಾರ ಮೀನ ಮೇಷ ಎಣಿಸುವುದಕ್ಕೆ ಸಹ ಸರ್ವತ್ರ ಟೀಕೆ ಎದುರಾಗಿದೆ.