ಮಂಗಳೂರಿನ ಬಿಶಪ್ ನಿವಾಸ ಕಣಿವೆಯ ಕೊನೆಯಲ್ಲಿ ಇರುವ ಬಿಜೆಪಿ ಕಚೇರಿಯ ರಿಪೇರಿ ಹೆಚ್ಚು ಕಡಿಮೆ ವರುಷದಿಂದ ನಡೆಯುತ್ತಿದೆ. ಇದರ ನಡುವೆ ಕದ್ರಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿ ರಿಪೇರಿ ನಡೆದಿದ್ದು ವಾಸ್ತು ವಿವಾದ ಎದ್ದಿದೆ.

Image Courtesy: Google

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹಿಂದೂ ಆಚರಣೆ ಟೀಕಿಸುವ ಕಾಂಗ್ರೆಸ್ ಪಕ್ಷ ಈಗ ವಾಸ್ತು ರೀತ್ಯಾ ಮೆಟ್ಟಿಲು ಹೆಚ್ಚಿಸುವ ಕೆಲಸ ನಡೆಸುತ್ತಿದೆ ಎಂದಿದ್ದಾರೆ.

ಕಟ್ಟಡಕ್ಕೆ ಹತ್ತು ವರುಷ ಆಗಿದೆ. ಎಲ್ಲ ಬಗೆಯ ಅಗತ್ಯದ ರಿಪೇರಿ ನಡೆದಿದೆ. ಇದರಲ್ಲಿ ವಾಸ್ತು ಇಲ್ಲವೇ ಆಚರಣೆಯ ಪ್ರಶ್ನೆ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಉತ್ತರಿಸಿದ್ದಾರೆ.

ಇನ್ನು ಬಿಜೆಪಿ ಕಚೇರಿಯ ರಿಪೇರಿ  ವರುಷದಿಂದ ನಡೆಯುತ್ತಿದ್ದರೂ ವಾಸ್ತು ಕೂಡಿ ಬಂದಂತೆ ಇಲ್ಲ ಎಂಬ ಮಾತೂ ಕೇಳಿ ಬಂದಿದೆ.