ಕಾರ್ಕಳ, ಅತ್ತೂರು, ಆ 01: ಸಂತ ಲೋರೆನ್ಸ್ ಬಸಿಲಿಕಾ ಅತ್ತೂರು ಇಲ್ಲಿನ ನಾಮಾಂಕಿತ ಹಬ್ಬದ ಪ್ರಯುಕ್ತ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗೆ ಉಡುಪಿ ಧರ್ಮಕೇಂದ್ರದ ಚಾನ್ಸಲರ್, ಅತೀ ವಂದನೀಯ ಧರ್ಮಗುರುಗಳಾದ ರೋಶನ್ ಡಿ'ಸೋಜ ಇವರು ಸಂತ ಲೋರೆನ್ಸರ ಪವಾಡ ಮೂರ್ತಿಯನ್ನು ಆಶೀರ್ವದಿಸಿ, ಬಸಿಲಿಕಾದ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ, ಹಬ್ಬದ ಮಹತ್ವದ ಬಗ್ಗೆ ಸಂದೇಶವಿತ್ತರು. 

ಈ ಕಾರ್ಯದಲ್ಲಿ ಬಸಿಲಿಕಾದ ರೆಕ್ಟರ್ ಹಾಗೂ ಕಾರ್ಕಳ ವಲಯದ ಡೀನ್ ಅತೀ ವಂದನೀಯ ಆಲ್ಬನ್ ಡಿ'ಸೋಜ, ಸಹಾಯಕ ಧರ್ಮಗುರುಗಳಾದ ಲ್ಯಾರಿ ಪಿಂಟೊ, ಅಧ್ಯಾತ್ಮಿಕ ಧರ್ಮಗುರುಗಳಾದ ರೋಮನ್ ಮಸ್ಕರೇನಸ್ ಮತ್ತು ಸಂತ ಲೋರೆನ್ಸರ ಭಕ್ತಾದಿಗಳು ಹಾಜರಿದ್ದರು. ಈ ಕಾರ್ಯಕ್ರಮವನ್ನು ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿ'ಸಿಲ್ವ ಇವರು ನೆರವೇರಿಸಿದರು. ತದನಂತರ ಪ್ರಾರ್ಥನೆ ನಮ್ಮ ಕುಟುಂಬವನ್ನು ಸಂಘಟಿಸುತ್ತದೆ ಎಂಬ ವಿಷಯದ ಬಗ್ಗೆ ಆರಾಧನೆ ಹಾಗೂ ಬಲಿಪೂಜೆಯನ್ನು ಅತೀ ವಂದನೀಯ ರೋಶನ್ ಡಿ'ಸೋಜ ಇವರು ನೆರವೇರಿಸಿದರು. ಮೊದಲ ದಿನದ ನೊವೆನಾ ಪ್ರಾರ್ಥನೆಯನ್ನು ಅತೀ ವಂದನೀಯ ಆಲ್ಬನ್ ಡಿ'ಸೋಜ ಇವರು ನೆರವೇರಿಸಿದರು. ಸೆಕ್ರೆಟರಿ ರೊನಾಲ್ಡ್ ನೊರೊನ್ಹಾ ರವರು ಉಪಸ್ಥಿತರಿದ್ದರು ಹಾಗೂ ಸಂಘಟಿತ ಕುಟುಂಬಗಳಿಗಾಗಿ ಪ್ರಾರ್ಥಿಸಲಾಯಿತು. ಬಂದ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.