ಕಾಂಗ್ರೆಸ್ ಆಡಳಿತ ಸಂದರ್ಭ ರಾಜ್ಯದಲ್ಲಿ  ಕಾನೂನು ಸುವ್ಯವಸ್ಥೆ ಹದಕೆಟ್ಟಿತ್ತು. ನಿಮ್ಮ ಆಡಳಿತದಲ್ಲಿ ಪೊಲೀಸರ ಮೇಲೆ ಹಲ್ಲೆ, ಹಿಂದು ನಾಯಕರ ಕೊಲೆ, ಮತಾಂಧ ಶಕ್ತಿಗಳ ಅಟ್ಟಹಾಸ ಮೆರೆಯುತಿತ್ತು. ನಿಮ್ಮ ಕಾಲ ಘಟ್ಟದಲ್ಲಿ ಜಿಲ್ಲೆಗೆ ಕೆಟ್ಟ ಹೆಸರು ಬಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ ಹೇಳಿದರು.

ಇವಾಗ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಹಾಗು ಜಿಲ್ಲೆಯಲ್ಲಿ  ಪೊಲೀಸ್ ಇಲಾಖೆ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತ ಇದೆ. ಪೊಲೀಸ್ ಇಲಾಖೆಯ ಮಾನಸಿಕ ಸ್ಥೈರ್ಯ ಕುಗ್ಗಿಸುವ ಹೇಳಿಕೆ ನೀಡಬೇಡಿ.

ಸುರತ್ಕಲ್ ಘಟನೆಯಲ್ಲಿ ನೀವು ಹೇಳುವ ರೀತಿಯಲ್ಲಿ ಘಟನೆ ನಡೆದಿಲ್ಲ. ಸಂಘಟನೆ ಕಾರ್ಯಕರ್ತರು ಮುಂದೆ ಆಗುವ ಅನಾಹುತವನ್ನು ತಪ್ಪಿಸಲು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅನೇಕ ಲವ್ ಜೆಹಾದ್ ಪ್ರಕರಣ ನಡೆದಿದೆ. ಪ್ರೀತಿಯಿಂದ ಬೆಳೆಸಿದ ಹೆಣ್ಮಕ್ಕಳನ್ನು ಕಳಕೊಂಡ ಅನೇಕ ದಂಪತಿಗಳು ಕಣ್ಣೀರು ಹಾಕುತ್ತ ಇದ್ದಾರೆ. ಅವರ ನೋವು ನಿಮಗೆ ಅರ್ಥ ಆಗುದಿಲ್ಲ. ಇಂಥ ಘಟನೆಗಳು ನಿಮ್ಮ ಮನೆಯಲ್ಲಿ ನಡೆದಿದ್ರೆ ನಿಮಗೆ ಗೊತಾಗುತಿತ್ತು ಎಂದು ತಿಳಿಸಿದರು