ಗೌತಮ್ ಅದಾನಿ ಸಂಪತ್ತು ಕಳೆದ ವರುಷ 1.40 ಲಕ್ಷ ಕೋಟಿ ರೂಪಾಯಿ ಇದ್ದುದು, ಈ ವರುಷ 5.05 ಲಕ್ಷ ಕೋಟಿಗೆ ಏರಿ ಅವರನ್ನು ಏಶಿಯಾದ ಎರಡನೆಯ ಅತಿ ದೊಡ್ಡ ಶ್ರೀಮಂತರಾಗಿ ಮಾಡಿದೆ. ಚೀನಾದ ವ್ಯಾಪಾರಿಗಳು ಹಿಂದೆ ಬಿದ್ದರು.
ಮುಕೇಶ್ ಅಂಬಾನಿ ಸತತ 10ನೆಯ ವರುಷ ಏಶಿಯಾದ ನಂಬರ್ ಒನ್ ಶ್ರೀಮಂತರಾಗಿಯೇ ಮುಂದುವರಿದಿದ್ದಾರೆ. ಏಶಿಯಾದ 10 ಅತಿ ದೊಡ್ಡ ಶ್ರೀಮಂತರಲ್ಲಿ ಅದಾನಿ ತಮ್ಮ ಶಾಂತಿಲಾಲ್ ಅದಾನಿ ಕೂಡ ಈಗ ಸೇರ್ಪಡೆ ಆಗಿದ್ದಾರೆ.