ಗುಜರಾತಿನ ವಿಧಾನ ಸಭೆಯಲ್ಲಿ 2020ರ ಮಹಾಲೇಖಪಾಲರ ವರದಿ ಮಂಡನೆಯಾಗಿದ್ದು, 2015ರ ಬಳಿಕ ಕೇಂದ್ರದಿಂದ ನೇರ ಹಣ ವರ್ಗಾವಣೆಯು 350% ಹೆಚ್ಚಿರುವುದು ವರದಿಯಾಗಿದೆ. ಇದೇ ಮೊದಲ ಬಾರಿಗೆ ಗುಜರಾತಿನಲ್ಲಿ ಕೇಂದ್ರದ ಅವ್ಯವಹಾರದತ್ತ ಹಣದ ಬಗೆಗೆ ಬೊಟ್ಟು ಮಾಡಲಾಗಿದೆ.
2014 ರಾಜ್ಯಕ್ಕೆ ಕೇಂದ್ರದ ನೆರವಿನ ನಿಯಮಾವಳಿಗಳಿಗೆ ವಿರುದ್ಧವಾಗಿ ಗುಜರಾತಿಗೆ ಹಣ ಹರಿದಿದೆ. ಕಾಸಗಿ ಕ್ಷೇತ್ರದ ಉದ್ಯಮ ವೃದ್ಧಿ ಹೆಸರಿನಲ್ಲಿ ಗುಜರಾತ್ ಸರಕಾರಕ್ಕೂ ಮಾಹಿತಿ ಇಲ್ಲದೆ ನೇರ ಹಣ ಹರಿವು ಆಗಿದೆ.
ಗುಜರಾತಿನ ಜಾರಿ ಸಂಸ್ಥೆಗಳಿಗೆ 2015- 16ರಲ್ಲಿ 2,452 ಕೋಟಿ ರೂಪಾಯಿ ನೀಡಲಾಗಿದ್ದರೆ 2019- 20ರಲ್ಲಿ ಅದು 11,659 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಇದು ಒಂದು ಸಣ್ಣ ಉದಾಹರಣೆ ಅಷ್ಟೆ.