ಕೇರಳದ 140 ಕ್ಷೇತ್ರಗಳ ವಿಧಾನ ಸಭಾ ಚುನಾವಣೆಯಲ್ಲಿ ಎಡರಂಗ ಅಭೂತಪೂರ್ವ ಗೆಲುವು ಪಡೆದಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಯಕತ್ವದಲ್ಲಿ ಸಿಪಿಎಂ ನೇತೃತ್ವದ ಎಡರಂಗವು 99 ಕ್ಷೇತ್ರಗಳನ್ನು ಕೈವಶ ಮಾಡಿಕೊಂಡು ಮೊದಲ ಬಾರಿಗೆ ‌ಮೂರನೇ ಎರಡು ‌ಬಹುಮತ ಸಾಧಿಸಿತು.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ರಂಗವು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಬಿಜೆಪಿ ಕಳೆದ ಬಾರಿಯ ಒಂದು ಸ್ಥಾನವನ್ನೂ ಕಳೆದುಕೊಂಡು ಸೊನ್ನೆ ಸುತ್ತಿತು.

ಒಂದು ಬಾರಿ ಅವರು ಒಂದು ಬಾರಿ ಇವರು ಎಂಬ 1957ರಿಂದ ಇದ್ದ ಸೂತ್ರ‌ ಮುರಿದ‌ ಮತದಾರರು‌ ಸತತ ಎರಡನೆಯ ಬಾರಿ ಎಡರಂಗಕ್ಕೆ ಅಧಿಕಾರ ನೀಡಿದ್ದಾರೆ.

ಸತತ ಎರಡನೆಯ ಬಾರಿ ಮುಖ್ಯಮಂತ್ರಿ ಆಗುವ ಪಿಣರಾಯಿ ವಿಜಯನ್ ಇತಿಹಾಸ ಬರೆದಿದ್ದಾರೆ.