ಮನುಷ್ಯ ಶ್ರೀಮಂತ ಆಗಿರಲಿ ಬಡವ ಆಗಿರಲಿ ದೊಡ್ಡ ವ್ಯಕ್ತಿ ಆಗಿರಲಿ ಸಣ್ಣ ವ್ಯಕ್ತಿ ಆಗಿರಲಿ ಮಹಿಳೆಯಾಗಿರಲಿ ಪುರುಷ ಆಗಿರಲಿ ಪ್ರತಿಯೊಬ್ಬ ವ್ಯಕ್ತಿಗಳ ಜೀವನದಲ್ಲಿ ಏರಿಳಿತ ಅನ್ನೋದು ಬಂದೆ ಬರುತ್ತೆ. ಇದೆ ಏರಿಳಿತದ ಸಮಯದಲ್ಲಿ ನಮಗೆ ಒಳ್ಳೇ ಸಮಯ ಹಾಗೂ ಕೆಟ್ಟ ಸಮಯದ ಅನುಭವ ಆಗುತ್ತದೆ.ಒಳ್ಳೇ ಸಮಯ ತುಂಬಾ ಸುಂದರವಾಗಿ ಬಹಳ ವೇಗವಾಗಿ ಮುಗಿದುಬಿಡುತ್ತದೆ. ಆದರೆ ಕೆಟ್ಟ ಸಮಯ ತುಂಬಾ ನಿಧಾನವಾಗಿ ಬಹಳ ಕಷ್ಟಕರವಾಗಿ ತುಂಬಾ ಸಮಯ ತಗೊಂಡು ಮುಗಿಯುತ್ತದೆ.ಅದು ಅಷ್ಟು ಸರಳವಾಗಿ ಮುಗಿಯಲ್ಲ.ಮನುಷ್ಯ ತನ್ನ ಕೆಟ್ಟ ಸಮಯದ ದಿನಗಳನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಏಕೆಂದರೆ ಮನುಷ್ಯ ತನ್ನ ಕಷ್ಟದ ದಿನಗಳಲ್ಲಿ ತುಂಬಾನೇ ವಿಶೇಷವಾದ ಸಂಗತಿಗಳನ್ನು ನೋಡಲು ಸಿಗುತ್ತದೆ. ಅವನು ಆ ಸಮಯದಲ್ಲಿ ತನ್ನ ಕಲ್ಪನೆಗೂ ಸಿಗದ ದೃಶ್ಯಗಳನ್ನು ನೋಡುತ್ತಾನೆ.
ನಿಜ ಹೇಳ್ಬೇಕು ಅಂದ್ರೆ ಕೆಟ್ಟಸಮಯಕ್ಕೆ ನಾವು ಧನ್ಯವಾದ ಹೇಳ್ಬೇಕು. ಏಕೆಂದರೆ ಅದು ನಮಗೆ ಸಾಕಷ್ಟು ವಿಚಾರಗಳನ್ನು ವಿಷಯಗಳನ್ನು ಕಲಿಸುತ್ತದೆ.
ನಿಜ ಹೇಳ್ಬೇಕು ಅಂದ್ರೆ ಈ ಕೆಟ್ಟ ಸಮಯ ಕಷ್ಟದ ದಿನಗಳು ನಮಗೆ ನಮ್ಮ ಸುತ್ತಮುತ್ತಲಿನ ಜನರ ನಿಜವಾದ ಮುಖಗಳನ್ನು ನಮ್ಮ ಮುಂದೆ ತಂದು ನಿಲ್ಲಿಸುತ್ತವೆ.ವಾಸ್ತವದಲ್ಲಿ ನಿಜವಾಗಿಯೂ ಯಾರು ನಮ್ಮೋರು ಯಾರು ನಮ್ಮೋರು ಅಲ್ಲಾ ಅನ್ನೋದನ್ನು ತುಂಬಾ ಚನ್ನಾಗಿ ಹೇಳಿ ಕೊಡುತ್ತದೆ. ಜೀವನ ಪೂರ್ತಿ ನಾವು ಯಾರ ಮೇಲೆ ಭರವಸೆ ನಂಬಿಕೆ ವಿಶ್ವಾಸ ಇಟ್ಕೋಬೇಕು. ಹಾಗೂ ಯಾರ ಜೊತೆ ಸ್ನೇಹ ಇಟ್ಕೋಬೇಕು ಯಾರ ಜೊತೆ ಸ್ನೇಹ ಮಾಡ್ಬಾರ್ದು ಅನ್ನೋದು ಹೇಳಿಕೊಡುತ್ತದೆ.. ನಿಜವಾಗಿಯೂ ಯಾರು ನಮ್ಮ ಸಂಭಂದಿಕರು ಯಾರು ನಮ್ಮ ಸ್ನೇಹಿತರು ಯಾರು ನಮ್ಮ ಎಲ್ಲಾ ಸಮಯದಲ್ಲಿ ಜೊತೆಯಾಗಿ ಯಾರು ಕೊನೆವರೆಗೂ ಇರುತ್ತಾರೆ ಅಂತ ತೋರಿಸುತ್ತದೆ.
ಕೆಲವು ಜನ ಭಗವಂತ ನನ್ನ ಕೆಟ್ಟ ಸಮಯದಲ್ಲಿ ಕಷ್ಟದಲ್ಲಿ ನನಗೆ ಏಕೆ ಸಹಾಯ ಮಾಡಲಿಲ್ಲ ಏಕೆ ನನಗೆ ಮಾರ್ಗದರ್ಶನ ಮಾಡಲಿಲ್ಲ ಅಂತ ಕೊರಗುತ್ತಾರೆ. ಯಾಕೆ ಭಗವಂತ ನನ್ನನ್ನು ಆಗುವ ಅನಾಹುತದಿಂದ ಕಾಪಾಡಲಿಲ್ಲ ಅಂತ ದೇವರನ್ನು ದುಶಿಸುತ್ತೇವೆ.....ಆದರೆ ಇದು ತಪ್ಪು ಹೇಗೆ ಅಂತ ಒಂದು ಸಣ್ಣ ಕಥೆಯ ಮುಖಾಂತರ ಹೇಳುತ್ತೇನೆ ಕೇಳಿ.
ವಿಷಯ ವಿವರಣೆ :
ಓದುಗರೇ ಒಂದು ಮಾತು ಇದೆ ಏನು ಅಂದ್ರೆ ಕೆಟ್ಟ ಸಮಯ ನಮ್ಮ ಅನುಮತಿ ತೆಗೆದುಕೊಂಡು ಬರೋದಿಲ್ಲ ಹಾಗೂ ನಮ್ಮ ಅನುಮತಿ ತಗೊಂಡು ಹೋಗಲ್ಲ ಅಂತ. ಸ್ನೇಹಿತರೆ ಇದರಿಂದ ಪಾರಾಗಲು ಇರುವ ಒಂದೇ ಒಂದು ಉಪಾಯ ಅಂದ್ರೆ ಅದು ನಿಮ್ಮ ಕರ್ಮನಿಷ್ಠೆ ಮತ್ತು ದೇವರಲ್ಲಿ ಭರವಸೆ.
ಆದರೆ ಸಾಕಷ್ಟು ಜನರು ನಾನು ದೇವರ ಪರಮ ಭಕ್ತ ನನಗೆ ದೇವರು ಯಾವತ್ತೂ ಏನು ಆಗೋದಕ್ಕೆ ಬಿಡೋಲ್ಲ ನನಗೆ ನನ್ನ ದೇವರಮೇಲೆ ನಂಬಿಕೆ ಇದೆ ಅಂತ ಹೇಳಿ. ತಾವು ಏನು ಪ್ರಯತ್ನವನ್ನೇ ಮಾಡದೇ ಜೀವನದಲ್ಲಿ ಮೋಸ ಹೋಗಿ ಸೋತು ಆಮೇಲೆ ನನ್ನ ಹಣೆಬರಹ ಸರಿ ಇಲ್ಲಾ ಭಗವಂತ ನನ್ನ ಜೊತೆ ಅನ್ಯಾಯ ಮಾಡಿದ ಅಂತ ದೇವರ ಮೇಲೆ ಕೋಪ ಮಾಡ್ಕೋತಾರೆ.ಹೌದು ತಾನೇ ಕಷ್ಟದ ಸಮಯದಲ್ಲಿ ನಾವು ಧೈರ್ಯವಾಗಿ ಇದ್ದು ಸಕಾರಾತ್ಮಕವಾಗಿ ಇದ್ದು ನಮ್ಮ ಕರ್ಮವನ್ನು ಮಾಡುತ್ತ ಇರಬೇಕು. ಅದನ್ನ ಬಿಟ್ಟು ಕೈ ಕಟ್ಟಿ ಕೂತು ಕುಡಬಾರದು.
ಒಂದು ದಿನ ಋಷಿಗಳು ತಮ್ಮ ಒಬ್ಬ ಶಿಷ್ಯನಿಗೆ ಒಂದು ಮಾತನ್ನು ಹೇಳುತ್ತಾರೆ.ನಾವು ಕರ್ಮನಿಷ್ಠರಾಗಿ ದೇವರ ಮೇಲೆ ನಂಬಿಕೆ ಭರವಸೆ ಇಟ್ಕೊಂಡು ಇದ್ರೆ ನಮ್ಮ ಜೀವನದಲ್ಲಿ ಬರುವ ಸಮಸ್ಯೆ ಎಷ್ಟೇ ದೊಡ್ಡದಾಗಿ ಇರಲಿ ಎಷ್ಟೇ ದೊಡ್ಡ ವಿಪತ್ತು ಬರುವದಿರಲಿ ಅದು ನಮಗೆ ಯಾವದೇ ಹಾನಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಕಳಿಸುತ್ತಾರೆ.
ಹೀಗೆ ಇರಬೇಕಾದರೆ ಒಂದು ದಿನ ಆ ಶಿಷ್ಯ ತನ್ನ ಊರಿಗೆ ಹೋಗಲು ಕಾಡಿನ ದಾರಿಯಲ್ಲಿ ಹೋಗುತ್ತಿರುವಾಗ ಅಚಾನಕಾಗಿ ಅವನ ಮುಂದೆ ಒಬ್ಬ ವ್ಯಕ್ತಿ ಓಡುತ್ತ ಬರುತ್ತಾನೆ. ಬಂದು ಅವನಿಗೆ ನೀನು ಮುಂದೆ ಹೋಗಬೇಡ ಅಲ್ಲಿ ಮದಏರಿದ ಆನೆಗಳು ಓಡಿ ಬರುತ್ತಿವೆ ಎಂದು ಹೇಳಿ ಅವನು ಅಲ್ಲಿಂದ ಹೋಗುತ್ತಾನೆ.ಆದರೆ ಆ ಶಿಷ್ಯ ತನ್ನ ಗುರುಗಳು ಹೇಳಿದ ಮಾತನ್ನು ನೆನಪಿಸಿಕೊಂಡು ನಾನು ಭಗವಂತನ ಪರಮ ಭಕ್ತ ನನಗೆ ಭಗವಂತನ ಮೇಲೆ ಸಂಪೂರ್ಣ ಭರವಸೆ ವಿಶ್ವಾಸ ಇದೆ ಯಾರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿ ಅಲ್ಲಿಂದ ಮುಂದೆ ಸಾಗುತ್ತಾನೆ. ಅವನು ಹೋಗುವಾಗ ಒಂದು ಆನೆ ಬಂದು ಅವನನ್ನು ತನ್ನ ಸೊಂಡಿಯಿಂದ ಎತ್ತಿ ನೂಕಿಬಿಡುತ್ತದೆ. ಅವನು ಕೆಳಗೆ ಬಿದ್ದು ಮೈಮೇಲೆ ಕೆಲವು ಗಾಯಗಳು ಆಗುತ್ತವೆ ಅವನು ಹೇಗೋ ತಪ್ಪಿಸಿಕೊಂಡು. ಬೇಸರವಾಗಿ ನೋವಲ್ಲಿ ಕೋಪದಲ್ಲಿ ದೇವರನ್ನು ದೋಶಿಸುತ್ತ ನೇರವಾಗಿ ತನ್ನ ಗುರುಗಳ ಹತ್ತಿರ ಬಂದು. ಆದ ಎಲ್ಲಾ ವಿಷಯವನ್ನು ತಿಳಿ ಹೇಳುತ್ತಾನೆ.ಹಾಗೂ ಹೇಳುತ್ತಾನೆ ನಿಮ್ಮ ಮಾತು ಸುಳ್ಳು ಗುರುಗಳೇ ದೇವರಲ್ಲಿ ನಂಬಿಕೆ ವಿಶ್ವಾಸ ಇಟ್ಟ ಪ್ರತಿಫಲವಾಗಿ ನನಗೆ ಏನು ದೊರಕಿದೆ ನೋಡಿ ಎಂದು ಹೇಳಿ ತನ್ನ ಬೇಸರವನ್ನು ತೋಡಿಕೊಳ್ಳುತ್ತಾನೆ. ಅದನ್ನ ಕೇಳಿ ಗುರುಗಳು ನಗುತ್ತಾ ಹೇಳುತ್ತಾರೆ.
ನಿನಗೆ ಭಗವಂತನ ಮೇಲೆ ಭಕ್ತಿ ಭರವಸೆ ಇರೋದಕ್ಕೆನೇ ಆ ಭಗವಂತ ಒಬ್ಬ ವ್ಯಕ್ತಿಯ ರೂಪದಲ್ಲಿ ಬಂದು ಆ ದಾರಿಯಲ್ಲಿ ಮುಂದೆ ಸಾಗಬೇಡ ಅಪಾಯ ಇದೆ ಅನ್ನೋ ಮುನ್ಸೂಚನೆ ಕೊಟ್ಟು ಅಲ್ಲಿಂದ ಹೋಗುವ ಪ್ರಯತ್ನ ಮಾಡು ಅಂತ ಹೇಳಿದ. ಆದರೆ ನೀನು ಆ ಪ್ರಯತ್ನ ಮಾಡಲಿಲ್ಲ ನೀನು ಅಕರ್ಮವನ್ನು ಆಲಸಿಯನ್ನು ಮಾಡಿದೆ.ನೀನು ಭಗವಂತನ ಮೇಲೆ ಭರವಸೆ ಇಟ್ಟಿರೋದಕ್ಕೆ ನಿನ್ನ ಪ್ರಾಣ ಉಳಿಯಿತು ನಿನ್ನ ನೂಕಿದ ಆನೆ ನಿನ್ನ ತುಳಿದು ಸಾಯಿಸಬಹುದಿತ್ತು. ಆದರೆ ಹಾಗೇ ಆಗಲಿಲ್ಲ. ನಿನಗೆ ಸಣ್ಣಪುಟ್ಟ ಗಾಯವಾಗಿ ಉಳಿದೆ.ನೀನು ಏನಾದರೂ ಕಾಡಲ್ಲಿ ದೇವರ ರೂಪದಲ್ಲಿ ಬಂದ ವ್ಯಕ್ತಿಯ ಮಾತು ಕೇಳಿ ಅಲ್ಲಿಂದ ಹೊರಗೆ ಬರುವ ಪ್ರಯತ್ನ ಮಾಡಿದ್ದರೆ. ಈ ಸಣ್ಣ ಪುಟ್ಟ ಗಾಯಗಳು ಆಗುತ್ತಿರಲಿಲ್ಲ.ಇದೆ ಭಗವಂತನ ಭರವಸೆಯ ಅರ್ಥ ಎಂದು ಹೇಳುತ್ತಾರೆ.
ಶಿಷ್ಯನಿಗೆ ತನ್ನ ತಪ್ಪಿನ ಅರಿವಾಯಿತು ಹಾಗೂ ಅದರ ಜೊತೆಗೆ ಅವನು ಕೆಲವು ವಿಷಯಗಳನ್ನು ಕಲಿತ.ಭಗವಂತನ ಮೇಲೆ ಭರವಸೆಯ ಅರ್ಥ ಆಲಸಿತನವಲ್ಲ. ಇದರ ಒಂದೇ ಒಂದು ಅರ್ಥ ಎಂದರೆ ಯಾವ ವ್ಯಕ್ತಿಗೇ ದೇವರ ಮೇಲೆ ಸಂಪೂರ್ಣ ಭರವಸೆ ವಿಶ್ವಾಸ ಇದೆಯೋ ಅವನಿಗೆ ತನ್ನ ಜೀವನದಲ್ಲಿ ಮುಂದೆ ಬರುವ ಅಪಘಾತ ಸಮಸ್ಯೆ ತೊಂದರೆಗಳ ಮುನ್ಸೂಚನೆ ಸಂಕೇತಗಳು ಅವಶ್ಯವಾಗಿ ಭಗವಂತನ ಮುಖಾಂತರ ಹೇಗೋ ಸಿಗುತ್ತದೆ. ಅದರಿಂದ ಅವನಿಗೆ ಮುಂದೆ ಬರುವ ಸಮಸ್ಯೆಗಳಿಂದ ಪಾರಾಗಲು ತಯ್ಯಾರಿ ಮಾಡಿಕೊಳ್ಳಲೆಂದು.ತನ್ನ ಭಕ್ತರನ್ನು ಕಾಪಾಡಿಕೊಳ್ಳಲು ಭಗವಂತ ಮಾಡುವ ಉಪಾಯ ರೀತಿ ಇದು.
ಆದರೆ ಯಾರು ವಿಶ್ವಾಸ ಭರವಸೆಯ ಹೆಸರಲ್ಲಿ ಏನು ಮಾಡುವದಿಲ್ಲವೋ ಅವರು ವಾಸ್ತವದಲ್ಲಿ ಆಲಸಿಗಳು ಆಗಿರುತ್ತಾರೆ. ದೇವರು ಆಲಸಿಗಳ ಸಹಾಯ ಯಾವತ್ತೂ ಮಾಡೋಲ್ಲ
ಅದಕ್ಕೆ ಕೆಟ್ಟ ಸಮಯದ ಕೆಟ್ಟ ಪರಿಸ್ಥಿತಿಯ ಸಂಕೇತಗಳು ಮುನ್ಸೂಚನೆಗಳು ಸಿಗುತ್ತಿದ್ದಂತೆಯೇ ಭಗವಂತನಲ್ಲಿ ಸರಿಯಾದ ಮಾರ್ಗದರ್ಶನ ಮಾಡಿ ಎಂದು ಪ್ರಾರ್ಥನೆ ಮಾಡುತ್ತ ಮುಂದೆ ಸಾಗಿರಿ.ಅದರಿಂದ ಹೊರ ಬರುವ ಪ್ರಯತ್ನ ಮಾಡಿ.
ನೆನಪಿರಲಿ ಕರ್ಮನಿಷ್ಠ ವ್ಯಕ್ತಿಯ ಮುಂದೆ ಪ್ರಳಯವು ತಲೆ ಬಾಗುತ್ತದೆ.
ಉಪಸಂಹಾರ:
ಸಮಯ ಯಾವಾಗಲು ನಡೆಯುತ್ತಾ ಇರುತ್ತದೆ. ಹಾಗೂ ಮನುಷ್ಯನ ಸಮಯ ಬದಲಾಗುತ್ತಾ ಇರುತ್ತದೆ. ಒಮ್ಮೆ ಒಳ್ಳೇ ಸಮಯ ಒಮ್ಮೆ ಕೆಟ್ಟ ಸಮಯ ಒಳ್ಳೇ ಸಮಯದಲ್ಲಿ ಒಳ್ಳೇ ಕಾರ್ಯಗಳನ್ನು ಮಾಡಿ ಹಾಗೂ ಕೆಟ್ಟ ಸಮಯದಲ್ಲಿ ಧೈರ್ಯವಾಗಿ ಇದ್ದು ಒಳ್ಳೇ ಸಮಯ ಬರುವಿಕೆಯನ್ನು ತಾಳ್ಮೆಯಿಂದ ಕಾಯಿರಿ...
ಲೇಖನ :ನವೀನ ಗೋಪಾಲಸಾ ಹಬೀಬ( M. A B. Ed )
ಮುಂಡರಗಿ ಗದಗ ಜಿಲ್ಲೆ