ನನ್ನೆಲ್ಲಾ ಓದುಗ ಬಂಧುಗಳಿಗೆ ನವೀನ ಮಾಡುವ ಹೃದಯಪೂರ್ವಕ ನಮಸ್ಕಾರಗಳು. ಇಂದಿನ ನನ್ನ ಲೇಖನದ ವಿಷಯ ಶೀರ್ಷಿಕೆ  ಇವನು ಅವನಲ್ಲ ಏನಿದು ವಿಚಿತ್ರವಾದ ಶೀರ್ಷಿಕೆ ಅಂತ ಯೋಚನೆ ಮಾಡುತ್ತಿದ್ದೀರಾ. ಹೌದು ಓದುವದಕ್ಕೆ ಇದು ವಿಚಿತ್ರವಾಗೆ ಕಾಣುತ್ತೆ. ಅದರೇ ಇದರೊಳಗಿರುವ ವಿಷಯ ಅದ್ಬುತ ಹಾಗೂ ತರ್ಕಕ್ಕೂ ನಿಲುಕದ್ದು. ನಾವೆಲ್ಲರೂ ಕೇಳ್ತಾ ಇರ್ತೀವಿ ಹೇಳ್ತಾ ಇರ್ತೀವಿ ಈಗಿನ ಜಗತ್ತಿನಲ್ಲಿ ಮುಖವಾಡದ ಜನ ಬಹಳ ಸಮಯಕ್ಕೆ ತಕ್ಕ ಹಾಗೇ ವರ್ತಿಸೋ ಜನ ಬಹಳ ಊಸರವಳ್ಳಿ ಹಾಗೇ ಬಣ್ಣ ಬದಲಾಯಿಸೋರು ಬಹಳ, ಕೊಟ್ಟ ಮಾತಿನ ಪ್ರಕಾರ ನಡೆದುಕೊಳ್ಳುವವರು ಬಹಳ ಕಮ್ಮಿ ಹಾಗೇ ಹೀಗೆ  ಅಂತ ಹೌದಾ, ಅದು ಅಲ್ದೆ ನಿನ್ನೆವರೆಗೂ  ಸರಿಯಾಗಿ ಇದ್ದ ಮನುಷ್ಯ ಅಚಾನಕ್ಕಾಗಿ ಇವತ್ತು ಬದಲಾಗಿದ್ದಾನೆ. ಅಂತಾನು ಹೇಳ್ತಿವಿ. ಆದರೆ ಅದಕ್ಕೆಲ್ಲ ಕಾರಣ ಏನು? ಮನುಷ್ಯನಲ್ಲಿ  ಈ  ತುರ್ತಾಗಿ ಬದಲಾವಣೆಗಳು ಏಕೆ ಆಗುತ್ತೆ? ಅಂತ ನಾವು ಯಾರು ಯೋಚನೆ ಮಾಡೋಲ್ಲ. ನಾನು ಅದರ ಬಗ್ಗೆ ಯೋಚಿಸಿ ನನಗೆ ತಿಳಿದ ಮಟ್ಟಿಗೆ ಒಂದು ವಿಚಾರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.

ಓದುಗರೇ ಮನುಷ್ಯನ ಹಠಾತ ಬದಲಾವಣೆಗೇ ಪ್ರಮುಖವಾಗಿ 2 ಡು ಕಾರಣಗಳು ಇವೆ. ಅದು ಮೊದಲನೇದಾಗಿ ಅಹಂಕಾರ ಎರಡು ಪರಿಸ್ಥಿತಿ/ಸಂದರ್ಭ ಹೌದು ಓದುಗರೇ ಮನುಷ್ಯನ ಅಚಾನಕ್ಕಾಗಿ ಬದಲಾಗುವ ಕಾರ್ಯದಲ್ಲಿ ಇವೆರಡು ಬಹಳ ಪ್ರಮುಖ ಪಾತ್ರ ವಹಿಸುತ್ತವೆ... ಅದೇ ಕಾರಣಕ್ಕೆ ಕೆಲವೊಮ್ಮೆ ನಮ್ಮ ಮುಂದೆ ನಾವು ಅಂದುಕೊಂಡ ಅವನು ಇರೋಲ್ಲ. ಅವನ ಜಾಗದಲ್ಲಿ ಆ ಸಮಯದಲ್ಲಿ ಅವನಲ್ಲದ ಇವನು*ಅನ್ನೋ ಅಹಂಕಾರ ಅಥವಾ ಪರಿಸ್ಥಿತಿ ಸಂದರ್ಭ ಅನ್ನೋ ಇವನು ಇರುತ್ತಾನೆ. ಆದರೆ ಆ ಕ್ಷಣ ನಾವು ಅದನ್ನ ಗಮನಿಸೋಲ್ಲ....

ನಾವು ನೋಡುತ್ತಿರುವ ಅವನು ಇವನಾಗಿ ಬದಲಾವಣೆ ಆಗಿರೋದು ಎಲ್ಲರಿಗೂ ಕಾಣೋಲ್ಲ. ಬದಲಾಗಿ ಯಾವ ಸಂಭಂದಗಳಲ್ಲಿ  ( ಸ್ನೇಹ/ಪ್ರೀತಿ/ಗಂಡ ಹೆಂಡತಿ )  ಘಾಡವಾದ ಪ್ರೀತಿ ವಿಶ್ವಾಸ ನಂಬಿಕೆ ಒಬ್ಬರಿಗೊಬ್ಬರು ಅರ್ಥಮಾಡಿಕೊಳ್ಳುವ ಮನಸ್ಥಿತಿ ಇರುತ್ತದೆಯೋ ಅಂತವರಿಗೆ  ಮಾತ್ರ ಆ ಬದಲಾಗಿರೋ ಇವನು ಕಾಣುತ್ತಾನೆ. ಓದುಗರೇ ನಮ್ಮ ಜೀವನದಲ್ಲಿ ಕೆಲವೊಮ್ಮೆ ಕೆಲ ಸಂಧಿಗ್ದ ಸನ್ನಿವೇಶಗಳು ಪರಿಸ್ಥಿತಿಗಳು ಎದುರಾಗುತ್ತವೆ. ಅವು ಬರುವದು ಕೂಡ ಅಚಾನಕ್ಕಾಗಿ ಆ ಸಮಯದಲ್ಲಿ ಮನುಷ್ಯನಾದವನು ಯೋಗ್ಯ ನಿರ್ಣಯ ತೆಗೆದುಕೊಂಡು ಮತ್ತೊಬ್ಬರಿಗೆ ಕೆಟ್ಟವನಾಗೋ ಪರಿಸ್ಥಿತಿ ಎದುರಾಗುತ್ತೆ.ಅದು ಹೇಗೆ ಎಂದು ಕೆಲ ಕಾಲ್ಪನಿಕ ಕಥೆಗಳ ಮುಖಾಂತರ ಕೆಲ ಸಿನಿಮಾ ಕಥೆಗಳ ಮುಖಾಂತರ ನಿಮಗೆ ಹೇಳಲು ಇಚ್ಚಿಸುತ್ತೇನೆ.

ನಮ್ಮ ಜನ ಹೇಗೆ ಅಂದ್ರೆ ಮುಂದೆ ಇರೋ ವ್ಯಕ್ತಿ ಅವನು ನಮ್ಮ ಸಮಯಕ್ಕೆ ಮತ್ತು  ನಮಗೆ ಅವನ ಅವಶ್ಯಕತೆ ಇರೋ ಸಮಯಕ್ಕೆ ಅವನು ನಮಗೆ ಸಿಗಲಿಲ್ಲ ಅಂದ್ರೆ ನಾವು ಅವನ ಸಂದರ್ಭ ಪರಿಸ್ಥಿತಿ ತಿಳಿಯದೆ ಅವನ ಬಗ್ಗೆ ಕೆಟ್ಟದಾಗಿ ಮಾತಾಡುತ್ತೇವೆ. ಇದು ತಪ್ಪು. ಯಾರೊಬ್ಬರೂ ಒಂದು ನಿಮಿಷ ಕೂಡ ಯೋಚನೆ ಮಾಡೋಲ್ಲ ನನ್ನ ಪ್ರಾಣ ಸ್ನೇಹಿತ ನನ್ನನ್ನು ಅತೀ ಹೆಚ್ಚು ಪ್ರೀತಿಸೋ ಸಂಗಾತಿ ನನ್ನ ಸಮಯಕ್ಕೆ ಏಕೆ ಆಗಲಿಲ್ಲ ನನಗೆ ಅವನ/ಅವಳ  ಅನಿವಾರ್ಯ ಇರುವಾಗ ಅವನು ಏಕೆ ನನಗೆ ಸಿಗಲಿಲ್ಲ ಅಂತ ಯಾರು ಯೋಚನೆ ಮಾಡೋಲ್ಲ.. ಪೂರ್ತಿ ವಿಷಯ ತಿಳಿಯದೆ ಕೇವಲ ಅವರು ನಮ್ಮ ಸಮಯಕ್ಕೆ ಆಗಲಿಲ್ಲ ಅನ್ನೋ ತಪ್ಪು ಕಲ್ಪನೆಯಲ್ಲಿ ವಜ್ರದಂತೆ ಇರುವ ಜನರನ್ನು ಕಳೆದುಕೊಳ್ಳುತ್ತೇವೆ... ಯಾರೊಬ್ಬರೂ ಅವರು ಏಕೆ ಬರಲಿಲ್ಲ ಏಕೆ ಆಗಲಿಲ್ಲ ಅನ್ನುವ ಕಾರಣ ತಿಳಿಯುವ ಪ್ರಯತ್ನ ಕೂಡ ಮಾಡೋಲ್ಲ. ಮೇಲಿಂದ ಕಾಣೋದನ್ನ ನೋಡಿ ತಪ್ಪು ನಿರ್ಧಾರ ತಗೋಳ್ತಾರೆ. ಅವರಿಗೆ ಅದೇ ಸಮಯದಲ್ಲಿ ಬೇರೆ ಏನೋ ಅತೀ ಮುಖ್ಯವಾದ ಅವರ ಮನೆಯ ಕಾರ್ಯ ದೊರಕಿರಬಹುದು. ಇಲ್ಲಾ ಅವರು ಯಾವದೋ ತಮ್ಮ ವ್ಯಯಕ್ತಿಕ ಕೆಲಸ ನಿಮಿತ್ತ ಬೇರೆ ಎಲ್ಲೋ ಹೋಗುವ ಕಾರ್ಯ ಬಂದಿರಬಹುದು. ಇಲ್ಲಾ ಅವರ ಮನೆಯಲ್ಲಿ ಏನೋ ಸಮಸ್ಯೆ ಆಗಿರಬಹುದು. ಇನ್ನು ನಾನಾ ತರಹದ ಸಮಸ್ಯೆಗಳು ಇರುತ್ತೆ ಎಲ್ಲಾ ಬಿಡಿಸಿ ಹೇಳುವ ಪರಿಸ್ಥಿತಿ ಕೂಡ ಇರೋಲ್ಲ... ಪ್ರಾಣ ಸ್ನೇಹಿತ ನೆಚ್ಚಿನ ಪ್ರೇಮಿ ನೆಚ್ಚಿನ ಗಂಡ ಹೆಂಡತಿ ಇವರೆಲ್ಲ ಭಾವನೆಗಳಿಗೆ ತುಂಬಾ ಹತ್ತಿರ ಇರುವವರು. ಇವರಿಗೆ ಎಲ್ಲವೂ ಬಿಡಿಸಿ ಹೇಳುವ ಅವಶ್ಯಕತೆ ಇರುವದಿಲ್ಲ.ಅದನ್ನ ನೀವುಗಳು ಅರ್ಥ ಮಾಡ್ಕೋಬೇಕು. ಅವರು ಇವತ್ತಿನ ದಿನ ನಾಳೆ ನಾನು ಬರ್ತೀನಿ ಅಂತ ಹೇಳಿ ಮರುದಿನ ಬರಲಿಲ್ಲ ಅಂದ್ರೆ ತಪ್ಪು ತಿಳಿಯುವ ಬದಲು ಅವನಿಗೆ ಏನೋ ಬೇರೆ ಕೆಲಸ ಸಿಕ್ಕಿರಬೇಕು. ಅವರ ಮನೇಲಿ ಏನಾದ್ರೂ ತೊಂದ್ರೆ ಆಗಿರ್ಬೇಕು ಅಂತ ತಿಳಿದು ನೀವು ಮುಂದೆ ಹೋಗಿ ಅದನ್ನ ಬಿಟ್ಟು ಒಂದು ಸಣ್ಣ ತಪ್ಪು ಕಲ್ಪನೆಯಿಂದ ಅತ್ಯಮೂಲ್ಯ ಸಂಭಂದಗಳನ್ನು ಕಳೆದುಕೊಳ್ಳಬೇಡಿ... ಏಕೆಂದರೆ ಇವತ್ತು ನಾವೆಲ್ಲರೂ ನಾಳೆಯನ್ನು ನಂಬಿ ನಮ್ಮ ಸ್ನೇಹಿತರಿಗೆ ಸಂಭಂದಿಗಳಿಗೆ ಏನೇನೊ ಭರವಸೆ ಕೊಡ್ತೀವಿ. ಆದರೆ ನಿಜವಾಗಿಯೂ ನಾಳೆ ನಾವು ಇರ್ತೀವೋ ಇಲ್ವೋ ಅಥವಾ ನಾಳೆ ನಮಗೆ ಅಂತ ಯಾವ ಸಮಸ್ಯೆ ಕಾಯ್ತಾ ಇರುತ್ತೋ ಅದು ಯಾರಿಗೂ ಗೊತ್ತಿಲ್ಲ.

ನೀವೆಲ್ಲ ಮುಂಗಾರುಮಳೆ ಸಿನಿಮಾ ನೋಡಿರ್ತೀರ ಅನ್ಕೋತೀನಿ ನೋಡಿರ ಅಲ್ವಾ ಆಯ್ತು, ಅದೇ ಸಿನಿಮಾ ಒಂದು ಉದಾಹರಣೆ ಕೊಡ್ತೀನಿ.. ಆ ಸಿನಿಮಾದಲ್ಲಿ ಗಣೇಶ ಮುಂಚೆಯೇ ಮದುವೆ ಗೊತ್ತಾಗಿರೋ ಹುಡುಗಿಯನ್ನ ಹಿಂದೆ ಬಿದ್ದು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡ್ತಾನೆ. ಏನೇನೊ ಮಾಡಿ ಕೊನೆಗೆ ಅವಳ ಮನಸ್ಸು ಗೆದ್ದು ಪ್ರೀತಿ ಪಡೀತಾನೆ ಇನ್ನೇನು ಅವಳನ್ನ ಓಡಿಸಿಕೊಂಡು ಹೋಗಿ ಮದುವೆ ಆಗ್ಬೇಕು ಅನ್ನೋ ಯೋಚನೆಯಲ್ಲಿ ಇದ್ದಾಗ ಅದಕ್ಕೂ ಮೊದ್ಲು ಅನಂತನಾಗ ಅವರಿಗೆ ಬೆಳಿಗ್ಗೆ ವಾಕಿಂಗ್ ಹೋದಾಗ ಹೇಳೋಣ ಒಪ್ಪಿದ್ರೆ ಆಯ್ತು ಇಲ್ಲಾ ಅಂದ್ರೆ ಓಡಿ ಹೋಗೋಣ ಅಂತ ತೀರ್ಮಾನ ಮಾಡಿ ವಾಕಿಂಗ್ ಬರ್ತಾರೆ ಇನ್ನೇನು ಗಣೇಶ ಎಲ್ಲಾ ಹೇಳ್ಬೇಕು ಅಷ್ಟರಲ್ಲಿ ಅನಂತನಾಗ ತಲೆ ಸುತ್ತಿ ಬೀಳ್ತಾರೆ ಅವನು ಹೋಗಿ ಎಬ್ಬಿಸಿ ಮಾತಾಡಿದಾಗ ಅನಂತನಾಗ ತಮಗೆ ಇರುವ ಆರೋಗ್ಯ ಸಮಸ್ಯೆ ಕುರಿತು ಮಗಳ ಮದುವೆ ಕುರಿತು ಕಂಡ ಕನಸನ್ನು ಗಣೇಶಗೇ ಹೇಳ್ತಾರೆ. ತನ್ನ ಪ್ರಾಣ ಉಳಿಸಿರೋ ಮಗಳಿಗೆ ಗೊತ್ತು ಮಾಡಿದ ಹುಡುಗ ದಿಗಂತ ಬಗ್ಗೆ ಹೇಳ್ತಾರೆ. ಒಟ್ನಲ್ಲಿ ಆ ಮದುವೆ ಅವರ ಎಷ್ಟು ದೊಡ್ಡ ಕನಸು ಜವಾಬ್ದಾರಿ ಅನ್ನೋದನ್ನ ಹೇಳ್ತಾರೆ. ಗಣೇಶ ಹತ್ರ ಕೂಡ ನನ್ನ ಮಗಳ ಮದುವೆ ಯಾವದೇ ಸಮಸ್ಯೆ ಇಲ್ಲದೆ ಚನ್ನಾಗಿ ಆಗೋ ಹಾಗೇ ನೋಡಿಕೋ ಅಂತ ಮಾತು ತಗೋತಾರೆ. ಅವಾಗ ಗಣೇಶ ಗೇ ಏನು ಹೇಳ್ಬೇಕು ಅಂತ ಗೊತ್ತಾಗಲ್ಲ ಅಲ್ಲಿಂದ ಸುಮ್ನೆ ವಾಪಾಸ್ ಬಂದು ಯೋಚನೆ ಮಾಡ್ತಾರೆ. ನಾನು ಏನಾದ್ರೂ ಅಪ್ಪಿ ತಪ್ಪಿ ನಂದಿನಿ ನಾ ಓಡಿಸಿಕೊಂಡು ಹೋಗಿ ಮದುವೆ ಆದೆ ಅಂದ್ರೆ ಈ ಮದುವೆ ಮನೆ ಸ್ಮಶಾನ ಆಗುತ್ತೆ ಮತ್ತು ನಮ್ಮ ಅಮ್ಮ ನಿಗೂ ಕೂಡ ನನ್ನ ಮಗ  ನನ್ನ ಸ್ನೇಹಿತೇ ಮನೆಗೆ ಬಂದು ಅವಳ ಮಗಳನ್ನ ಕರ್ಕೊಂಡು ಹೋಗಿ ಅವರ ಮನೆ ಹಾಳು ಮಾಡಿದ ಅಂತ  ಅವರು ನನ್ನ ಯಾವತ್ತೂ ಕ್ಷಮಿಸಲ್ಲ ಅಂತ ತಿಳಿದು.... ನಾನು ಕೇವಲ ಒಂದು ಹುಡುಗಿಯನ್ನ ಪಡೆಯೋ ಹುಚ್ಚಾಟ ಮಾಡಿ ಸ್ವಾರ್ಥಿ ಆಗಿ ಕರ್ಕೊಂಡು ಹೋದ್ರೆ ಈ ಮನೆ ಸ್ಮಶಾನ ಆಗುತ್ತೆ ಅದೇ ನಾನು ನನ್ನ ಪ್ರೀತಿ ತ್ಯಾಗ ಮಾಡಿದ್ರೆ ನನ್ನ ಮನೆ ಈ ಮನೆ ಎರಡು ಚನ್ನಾಗಿ ಖುಷಿಯಾಗಿ ಸಂತೋಷದಿಂದ ಇರುತ್ತೆ ಅಂತ ತೀರ್ಮಾನ ಮಾಡಿ ತನ್ನ ಪ್ರೀತಿ ತ್ಯಾಗ ಮಾಡೋ ನಿರ್ಧಾರಕ್ಕೆ ಬರ್ತಾನೆ...

ಅಲ್ಲಿಂದ ತಾನು ಪ್ರೀತಿ ಮಾಡೋ ಹುಡುಗಿನಾ ನಿರ್ಲಕ್ಷ ಮಾಡುತ್ತ ಹೋಗುತ್ತಾನೆ. ಅದು ಅವಳಿಗೆ ಗೊತ್ತಾದಾಗ ಅವಳು ಅವನ ಜೊತೆ ಮಾತಾಡೋಕೆ ಅಂತ ಅವನನ್ನು ಹೊರಗಡೆ ಕರೆದಾಗ ಗಣೇಶ ಹೇಗಾದ್ರು ಮಾಡಿ ಅವಳ ಮನಸ್ಸಲ್ಲಿ ನನ್ನ ಬಗ್ಗೆ ಕೆಟ್ಟ ಭಾವನೆ ಹುಟ್ಟಿಸಬೇಕು ಅವಳು ನನ್ನ ಬಗ್ಗೆ ಅಸಯ್ಯ ಪಟ್ಕೋಬೇಕು ಅಂತ ತೀರ್ಮಾನ ಮಾಡಿ ಅವ್ಳು ಕರೆದಿರೋ ಜಾಗಕ್ಕೆ ಹೋಗಿ ನಿಲ್ತಾನೇ ಅವಳು ಕೇಳ್ತಾಳೆ ನನ್ನೇಕೆ ನಿರ್ಲಕ್ಷ ಮಾಡ್ತಾ ಇದ್ದೀಯ ಮದುವೆ ಹತ್ರ ಬಂತು ನನ್ನ ಕರ್ಕೊಂಡು ಹೋಗು ಅಂತ ಹೇಳಿದಾಗ ಗಣೇಶ ಹೇಳ್ತಾರೆ... ಕರ್ಕೊಂಡು ಹೋಗ್ಬೇಕಾ ಯಾರನ್ನ ಎಲ್ಲಿ ಅಂತ ಕೇಳ್ತಾನೆ ಅದಕ್ಕೆ ನಂದಿನಿ ತಮಾಷೆ ಬೇಡ ಅಂತ ಹೇಳಿದಾಗ ಗಣೇಶ ನನಗೆ ನಿನ್ನ ಮೇಲೆ ಪ್ರೀತಿ ಗೀತಿ ಏನು ಇಲ್ಲಾ ನಾನು ನಿನ್ನ ಜೊತೆ ಸುಮ್ನೆ ತಮಾಷೆ ಮಾಡಿದೆ ನೀನು ಅದನ್ನ ನಿಜ ಅನ್ಕೊಂಡಿಯ ಅಂತ ಹೇಳ್ತಾನೆ ಅದರ ಜೊತೆಗೆ ಮತ್ತೊಂದು ಮಾತು ಹೇಳ್ತಾನೆ ನೀನು ಮೊದಲೇ ಮದುವೆ ನಿಶ್ಚಯ ಆದ ಹುಡುಗಿ ನಾನು ಬಂದು ಏನೋ ತಮಾಷೆಗೇ ಪ್ರೀತಿ ಅಂತ ಹೇಳ್ದೆ ನನ್ನ ಪ್ರೀತಿ ಮಾಡಿದೆ ನಾಳೆ ನನ್ನ ಜೊತೆ ಮದುವೆ ನಿಶ್ಚಯ ಆದ್ಮೇಲೆ ನಿಂಗೆ ಮತ್ತೊಬ್ಬ ಇಷ್ಟ ಆಗಲ್ಲ ಅಂತ ಹೇಗೆ ನಂಬೋದು ಅಂತ ಹೇಳಿದ ಕುಡ್ಲೆ ನಂದಿನಿ ಅವನ ಕಪಾಳಕ್ಕೆ ಹೊಡೆದು ಛಿ ನೀನು ಇಷ್ಟು ಕೆಟ್ಟ ಮೆಂಟಾಲಿಟಿ ಇರೋನು ಅಂತ ಗೊತ್ತಿರ್ಲಿಲ್ಲ ಅಂತ ಹೇಳಿ ಅಲ್ಲಿಂದ ಅಳ್ತಾ ಓಡಿ ಹೋಗ್ತಾಳೆ...

ಆದರೆ ಆ ನಂದಿನಿಗೇ ತನ್ನನ್ನಾ ಬೆಟ್ಟದಷ್ಟು  ಪ್ರೀತಿ ಮಾಡೋ ಹುಡುಗ ಹೀಗೇಕೆ ಮಾತಾಡಿದ ಅಂತ ಗೊತ್ತೇ ಇಲ್ಲಾ ...... ಅವಳು ಯೋಚನೆ ಕೂಡ ಮಾಡಲಿಲ್ಲ ಕೇವಲ ಅವನ ಮೇಲಿನ ಮಾತುಗಳನ್ನು ಕೇಳಿ ತಪ್ಪು ತಿಳಿದು ಹೋದಳು.....

ನೋಡಿ ಓದುಗರೇ ಹೇಗಿದೆ ಪರಿಸ್ಥಿತಿ ಸಂದರ್ಭದ ಶಕ್ತಿ...ನಂದಿನಿ ದೃಷ್ಟಿಯಲ್ಲಿ ಅವನು ಕೆಟ್ಟವನು ಆದ್ರೆ ಪ್ರೇಕ್ಷಕರ ದೃಷ್ಟಿಯಲ್ಲಿ ಮಹಾತ್ಮಾ ನೋಡಿ ಈ ಪರಿಸ್ಥಿತಿ ಸಂದರ್ಭಗಳು ಎಂತಹ ಮನುಷ್ಯರನ್ನು ಕೂಡ ಬದಲಾವಣೆ ಮಾಡುತ್ತೇ ಅನ್ನೋದಕ್ಕೆ ಇದೆ ಉತ್ತಮ ಉಧಾಹರಣೆ ಅದಕ್ಕೆ ಹೇಳೋದು ಒಬ್ಬರ ಬಗ್ಗೆ ಪೂರ್ತಿ ವಿಷಯ ತಿಳಿಯದೆ ಮಾತನಾಡಬೇಡಿ ಅಂತ......

ಇನ್ನು ಕೆಲ ಜನ ಹೇಳ್ಬೋದು ಗಣೇಶ ನಂದಿನಿ ಗೇ ಎಲ್ಲಾ ಹೇಳಿ ಅವಳಿಗೆ ದಿಗಂತ್ ಜೊತೆ ಮದುವೆ ಮಾಡಿಕೋ ಅದೇ ಉತ್ತಮ ಅದ್ರಲ್ಲೇ ನಿನ್ನ ನನ್ನ ಕುಟುಂಬದ ಸಂತೋಷ ಇದೆ ಅಂತ... ಆದ್ರೆ ಅದು ಆಗಲ್ಲ ಸ್ನೇಹಿತರೆ... ಯಾಕೆ ಗೊತ್ತಾ.... ಹುಡುಗಿಯರ ಮನಸ್ಸು ತುಂಬಾ ಸೂಕ್ಷ್ಮ ತುಂಬಾನೇ ಮೃದು ನಿಷ್ಕಲ್ಮಶ ಹಾಗೂ ಅಷ್ಟೇ ಘಟ್ಟಿ ಕೂಡ ಹೌದಾ ದ್ವೇಷದಲ್ಲಿ ಅವರನ್ನು ಸೋಲಿಸೋಕೆ ಆಗೋಲ್ಲ... ಒಂದು ವೇಳೆ ಗಣೇಶ ಹೇಳಿ ಏನೋ ಮಾಡಿ ಮದುವೆ ಮಾಡಿಸಿದ್ರು ಅಂದ್ರು ನಂದಿನಿ ಒಲ್ಲದ ಮನಸ್ಸಲ್ಲಿ ಮದುವೆ ಆಗಿ ಒಲ್ಲದ ಮನಸಿಂದ ದಿಗಂತ್ ನ ಹೆಂಡತಿ ಆಗ್ತಾ ಇದ್ಲು ಪ್ರತಿದಿನ ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಪ್ರೀತಮ್ ನಾ ನೆನಸಿ ಕಣ್ಣೀರು ಹಾಕ್ತಾ ಇದ್ಲು ಆದ್ರೆ ಗಣೇಶ ಅವಳ ಜೊತೆಗೆ ಅಷ್ಟು ಕೆಟ್ಟದಾಗಿ ನಡೆದುಕೊಂಡಿದ್ದಕ್ಕೆ ಅವಳು ಅವನನ್ನು ದ್ವೇಷಿಸುತ್ತ ಅವನನ್ನು ಮರೆತು ತಾನು ಸಂಪೂರ್ಣವಾಗಿ ಬದಲಾಗಿ ತನ್ನ ತಂದೆ ಹತ್ತಿರ ಹೋಗಿ ತಾನು ಮಾಡ ಹೊರಟಿದ್ದ ತಪ್ಪಿಗೆ ಕ್ಷಮೆ ಕೇಳಿ ಸಂಪೂರ್ಣವಾಗಿ ದಿಗಂತನನ್ನು ವರೆಸುತ್ತಾಳೆ ಇದರಿಂದ ಅವಳ ಭವಿಷ್ಯ ಜೀವನ ಚನ್ನಾಗಿ ಇರುತ್ತೆ... ಈಗ ಹೇಳಿ ಗಣೇಶ್ ಮಾಡಿದ್ದೂ ಸರಿನಾ ತಪ್ಪಾ..

ಮೇಲಿಂದ ಗಣೇಶ ಮಾತನಾಡಿದ ಮಾತುಗಳು ಕೆಟ್ಟದಾಗಿ ಇರಬಹುದು ಆದರೆ ಗಣೇಶನ ಉದ್ದೇಶ ಕೆಟ್ಟದಲ್ಲ

ಇನ್ನು ಮತ್ತೊಂದು ಸಿನಿಮಾ ರವಿಚಂದ್ರನ್ ಸರ್ ಹಾಗೂ ಮೀರಾಜಾಸ್ಮಿನ ಅಭಿನಯದ ಹೂ ಅದರಲ್ಲಿ ರವಿಚಂದ್ರನ್ ಮೀರಾಜಾಸ್ಮಿನ ಚಿಕ್ಕನಿಂದ ಪ್ರಾಣ ಸ್ನೇಹಿತರು ದೊಡ್ಡೋರಾದಾಗ ಮೀರಾಜಾಸ್ಮಿನ ಮದುವೆ ಮಾತು ಬಂದಾಗ ಮೀರಾ ನಾ ಮದುವೆ ಆಗೋ ಹುಡುಗನ ತಂದೆ ರವಿಚಂದ್ರನ್ ಬಳಿ ಬಂದು ನೀನು ಹೇಗಾದ್ರು ಮಾಡಿ ಮೀರಾ ಸ್ನೇಹ ಇಲ್ಲಿಗೆ ನಿಲ್ಲಿಸಬೇಕು. ಇಲ್ಲಾ ಅಂದ್ರೆ ಮುಂದೆ ಒಂದು ದಿನ ನಿನ್ನಿಂದ ಮೀರಾ ಹಾಗೂ ನನ್ನ ಮಗನ ಮದ್ಯೆ ಭಿನ್ನಾಬಿಪ್ರಾಯ ಬಂದ್ರು ಬರಬಹುದು. ಅದಕ್ಕೆ ನೀನು ಹೇಗಾದ್ರು ಮಾಡಿ ಅವಳ ದೃಷ್ಟಿಯಲ್ಲಿ ಕೆಟ್ಟೋನಾಗ್ಬೇಕು ಅವಳನ್ನ ಅವಾಯ್ಡ್ ಮಾಡಬೇಕು ಅಂತ ಹೇಳ್ತಾರೆ.. ಅದಕ್ಕೆ ರವಿಚಂದ್ರನ್ ತನ್ನ ಪ್ರಾಣ ಸ್ನೇಹಿತೇ ಚನ್ನಾಗಿ ಇರ್ಬೇಕು ಅಂತ ಬೇಕು ಅಂತ ಅವಳ ಜೊತೆಗೆ ಕೆಟ್ಟದಾಗಿ ನಡ್ಕೋತಾನೆ ಹಾಗೇ ಮಾಡಿ ಆ ಊರು ಬಿಟ್ಟು ಹೋಗೋ ಪ್ರಯತ್ನ ಮಾಡ್ತಾನೆ...ನೋಡ್ತಾ ಹೋದ್ರೆ ತುಂಬಾ ಇಂತಹ ಉದಾ ಸಿಗುತ್ತೆ.. ಸ್ನೇಹಿತರೇ ಅದಕ್ಕೆ ನಾವೆಲ್ಲರೂ ಮೇಲಿಂದ ಯಾವದರ ಬಗ್ಗೆನು ನೋಡದೆ ಪ್ರತಿಯೊಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದು ಮಾತನಾಡಬೇಕು...... ತುಂಬಾ ಸಲ ನಾವು ಅನ್ಕೊಂಡಿರೋ ನಮ್ಮವರು ನಮ್ಮವರಾಗಿರಲ್ಲ ಅವರ ಪರಿಸ್ಥಿತಿ ಸಂದರ್ಭ ಅವರನ್ನು ಬೇರೆಯವರನ್ನಾಗಿ ಮಾಡಿರುತ್ತದೆ...


ನವೀನ ಗೋಪಾಲಸಾ ಹಬೀಬ
ಮುಂಡರಗಿ ಗದಗ ಜಿಲ್ಲೆ